ಕೋಲ್ಕತಾ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಪಕ್ಷದ ವ್ಯಾಪ್ತಿ ಮೀರಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಭಾರತವನ್ನು ತುಂಡರಿಸುವ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಆಲಂ ಬೆಚ್ಚಿ ಬೀಳಿಸುವ ಹೇಳಿಕೆ ನೀಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ಬಿರ್ಭುಮ್ ಪ್ರದೇಶದ ನ್ಯಾನೂರ್‌ನ ಬಾಸಾದಲ್ಲಿ ಟಿಎಂಸಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಮುಸ್ಲಿಂ ಜನಸಂಖ್ಯೆಯ ಶೇಕಡಾ 30 ರಷ್ಟು ಜನರು ಒಗ್ಗೂಡಿದರೆ ನಾವು ನಾಲ್ಕು ಹೊಸ ಪಾಕಿಸ್ತಾನಗಳನ್ನು ಕಟ್ಟಬಹುದು ಎಂದಿದ್ದಾರೆ.
ನಾವು ಜನಸಂಖ್ಯೆಯಲ್ಲಿ ಶೇ 30ರಷ್ಟು ಇದ್ದೇವೆ. ಅವರು (ಹಿಂದೂಗಳು) ಶೇ.70 ಇದ್ದಾರೆ. ಅವರು ಶೇಕಡಾ 70 ರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತಾರೆ. ನಮ್ಮ ಮುಸ್ಲಿಂ ಜನಸಂಖ್ಯೆಯು ಒಂದು ಬದಿಗೆ ಹೋದರೆ ನಾಲ್ಕು ಹೊಸ ಪಾಕಿಸ್ತಾನಗಳನ್ನು ರಚಿಸಬಹುದು. ಆಗ 70 ರಷ್ಟು ಜನಸಂಖ್ಯೆ ಎಲ್ಲಿಗೆ ಹೋಗುತ್ತದೆ? ಊಹಿಸಿಕೊಳ್ಳಿ ಎಂದು ಟಿಎಂಸಿ ನಾಯಕ ಬೆಂಕಿ ಹಚ್ಚಿದ್ದಾರೆ.