ಕರ್ನಾಟಕ

karnataka

ETV Bharat / bharat

VIDEO:  ಶ್ರೀನಗರ - ಬಾರಾಮುಲ್ಲಾ ಹೆದ್ದಾರಿಯಲ್ಲಿ ಐಇಡಿ ಸ್ಫೋಟ?! - bomb blast in jamuu kashmir

ಬುಲ್ಗಾಮ್‌ನ ಶ್ರೀನಗರ - ಬಾರಾಮುಲ್ಲಾ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದ್ದು, ಅದನ್ನು ಐಇಡಿ ಎಂದು ಶಂಕಿಸಲಾಗಿದೆ.

IED blast  on Srinagar-Baramulla highway
ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಐಇಡಿ ಸ್ಫೋಟ

By

Published : Jun 11, 2022, 12:15 PM IST

ಶ್ರೀನಗರ (ಜಮ್ಮು-ಕಾಶ್ಮೀರ):ಬುಲ್ಗಾಮ್‌ನ ಶ್ರೀನಗರ - ಬಾರಾಮುಲ್ಲಾ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತುವೊಂದು(ಬಾಕ್ಸ್​​) ಪತ್ತೆಯಾಗಿದ್ದು, ಅಧಿಕಾರಿಗಳು ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಅನುಮಾನಾಸ್ಪದ ವಸ್ತು ಬ್ಲಾಸ್ಟ್ ಆಗಿದ್ದು, ಭದ್ರತಾ ಕಾರ್ಯಾಚರಣೆ ಮುಂದುವರಿದಿದೆ.

ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಐಇಡಿ ಸ್ಫೋಟ

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದ ಟೈಂಪಾಸ್ ಹೋಟೆಲ್ ಬಳಿಯ ಬಲ್ಗಾಮ್ ಹೈಗಮ್‌ನಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅದರಲ್ಲಿ ಐಇಡಿ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

ಕೂಡಲೇ ಪೊಲೀಸರು ಮತ್ತು ಸೇನೆ ಸ್ಥಳಕ್ಕೆ ಧಾವಿಸಿ ನಂತರ ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ಆ ವಸ್ತು ಸ್ಫೋಟಗೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಜಮೀನು ವಿವಾದ: ಯುವತಿ ಕೊಲೆ ಮಾಡಿ, 3 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!


ABOUT THE AUTHOR

...view details