ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಟಿಪ್ಪರ್ ವಾಹನದಲ್ಲಿ ಉಗ್ರರು ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದೆ.
ಅನಂತ್ನಾಗ್ನ ಬಿಜ್‌ಬೆರಾ ಪ್ರದೇಶದ ಪಜಲ್‌ಪೊರಾದಲ್ಲಿ ಸಣ್ಣ ಹಾಗೂ ಕಡಿಮೆ ತೀವ್ರತೆಯ ಐಇಡಿ ಬ್ಲಾಸ್ಟ್ ಆಗಿದ್ದು, ಯಾವುದೇ ಸಾವು - ನೋವು ಸಂಭವಿಸಿಲ್ಲ. ಕೆಲ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.