ಕರ್ನಾಟಕ

karnataka

ETV Bharat / bharat

ರಸ್ತೆಗಳನ್ನಾಳಿದ ರಸ್ತೆ ರಾಜರೆಲ್ಲಾ ಇವರ ಬಳಿ ಇವೆ: ಬೈಕ್​ಗಳ ಸಂಗ್ರಹವೇ ಇವರ ಹವ್ಯಾಸ - ಬೈಕ್​ಗಳ ಸಂಗ್ರಹವೇ ಇವರ ಹವ್ಯಾಸ

ಒಂದು ಕಾಲದಲ್ಲಿ ರಸ್ತೆಗಳನ್ನಾಳಿದ ರಸ್ತೆ ರಾಜರಾದ ಲ್ಯಾಂಬಿ, ವೆಸ್ಪಾ, ಚೇತಕ್, ಯೆಜ್ಡಿ, ರಾಜ್‌ಡೂತ್ - ಇಲ್ಲಿಯ ಬಿಎಸ್‌ಎನ್‌ಎಲ್ ಕಚೇರಿಯ ಬಳಿಯಿರುವ ಅನಾಜ್ ಮನೆಯಲ್ಲಿ ತಾವು ಇನ್ನೂ ಶಕ್ತಿಶಾಲಿ ಎಂದು ಘೋಷಿಸಿಕೊಳ್ಳುವ ಹಾಗೆ ಕಾಣುತ್ತಿವೆ.

Idukki man keeps alive many rare vintage two-wheelers in his collection
Idukki man keeps alive many rare vintage two-wheelers in his collection

By

Published : Apr 22, 2021, 3:29 PM IST

ಇಡುಕ್ಕಿ (ಕೇರಳ):ಎಲ್ಲರಿಗೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಠ ಕಂಡಿತ ಇರುತ್ತದೆ. ಅದಕ್ಕೆ ಸರಿಯಾದ ಪ್ರೋತ್ಸಾಹ ಮುಖ್ಯ. ಇಲ್ಲೋರ್ವ ಯುವಕ ದ್ವಿಚಕ್ರ ವಾಹನಗಳ ಕುರಿತಂತೆ ತಮ್ಮದೇ ಆದ ರೀತಿಯಲ್ಲಿ ಹೆಸರು ಮಾಡಿದ್ದಾನೆ.

ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಲಿ ಮೂಲದ ಅನಾಜ್ ಕೂನಾರಿ ಅಪರೂಪದ ವಿಂಟೇಜ್ ದ್ವಿಚಕ್ರ ವಾಹನಗಳನ್ನು ಇಟ್ಟುಕೊಂಡಿರುವ ವ್ಯಕ್ತಿ. ಆದಿಮಲಿ ಪಟ್ಟಣದಲ್ಲಿ ಸಾಕು ಪ್ರಾಣಿಗಳು ಮತ್ತು ಪಕ್ಷಿಗಳ ಮಾರಾಟ ಅಂಗಡಿಯನ್ನು ನಡೆಸುತ್ತಿರುವ ಅನಾಜ್, 65 ಕ್ಕೂ ಹೆಚ್ಚು ಸ್ಕೂಟರ್‌ಗಳು ಮತ್ತು ಬೈಕ್‌ಗಳನ್ನು ಹೊಂದಿದ್ದಾರೆ. ಇವರ ಈ ಸೆಲೆಕ್ಷನ್​ನಲ್ಲಿ ಹಿಂದೆ ರಸ್ತೆಯನ್ನಾಳಿದ ಸ್ಕೂಟರ್​ಗಳನ್ನೆಲ್ಲಾ ಕಾಣಬಹುದಾಗಿದೆ.

1959 ರ ಮಾದರಿಯ ಇಟಾಲಿಯನ್ ಲ್ಯಾಂಬ್ರೆಟ್ಟಾವನ್ನು ಇವರದೇ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಹಾಗೆಯೇ ಬಜಾಜ್ ಹಳೆಯ ತಮ್ಮದೇ ಆದ ವೈಭವದ ಕಥೆಗಳನ್ನು ಹೇಳುವ ಲಕ್ಷ್ಮಿ, ಟಿವಿಎಸ್ ಎಕ್ಸ್‌ಪ್ರೆಸ್, ಬಾಬಿ ರಾಜ್‌ಡೂತ್, ಅನಾಜ್ ಬೈಕ್​ಗಳ ಸಂಗ್ರಹ ಬೈಕ್​ ಕ್ರೇಜ್​ ಇರುವವರಿಗೆ ರೋಮಾಂಚನ ಉಂಟುಮಾಡುತ್ತದೆ.

ಒಂದು ಕಾಲದಲ್ಲಿ ರಸ್ತೆಗಳನ್ನಾಳಿದ ರಸ್ತೆ ರಾಜರಾದ ಲ್ಯಾಂಬಿ, ವೆಸ್ಪಾ, ಚೇತಕ್, ಯೆಜ್ಡಿ, ರಾಜ್‌ಡೂತ್ - ಇಲ್ಲಿಯ ಬಿಎಸ್‌ಎನ್‌ಎಲ್ ಕಚೇರಿಯ ಬಳಿಯಿರುವ ಅನಾಜ್ ಮನೆಯಲ್ಲಿ ತಾವು ಇನ್ನೂ ಶಕ್ತಿಶಾಲಿ ಎಂದು ಘೋಷಿಸಿಕೊಳ್ಳುವ ಹಾಗೆ ಕಾಣುತ್ತಿವೆ. ಇನ್ನು ಈ ಎಲ್ಲ ಕಾರಣಗಳಿಂದ ವಿಂಟೇಜ್ ದ್ವಿಚಕ್ರ ವಾಹನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದು ಅನಜ್ ಅವರ ಕನಸಾಗಿದೆಯಂತೆ.

ಬೈಕುಗಳು ಮತ್ತು ಬೈಕು ರೇಸ್‌ಗಳ ಬಗೆಗಿನ ಒಲವು ವಿಂಟೇಜ್ ದ್ವಿಚಕ್ರ ವಾಹನ ಸಂಗ್ರಹದ ಬಗ್ಗೆ ಮನಸ್ಸು ಮಾಡಲು ಕಾರಣವಾಯಿತಂತೆ. ಚಿಕ್ಕ ವಯಸ್ಸಿನಿಂದಲೇ ಇವರು ಹಳೆಯ ಕಲಾಕೃತಿಗಳು ಮತ್ತು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ವಾಹನಗಳಲ್ಲದೇ ಅನಾಜ್ ಅವರ ಸಂಗ್ರಹದಲ್ಲಿ ತುಂಬಾ ಹಳೆಯ ದೂರದರ್ಶನ, ರೇಡಿಯೋ ತರಹದ ಇತರ ವಸ್ತುಗಳು ಕೂಡ ಇವೆ.

ಸಿನೆಮಾ ಮತ್ತು ಟೆಲಿವಿಷನ್ ಧಾರಾವಾಹಿ ಕಲಾವಿದರೂ ಆಗಿರುವ ಅನಾಜ್ 1993 ಮತ್ತು 2000 ರ ನಡುವೆ ಮಡ್ ಟ್ರ್ಯಾಕ್ ರೇಸ್‌ಗಳಲ್ಲಿ ಸಕ್ರಿಯರಾಗಿದ್ದರು.

ಅನಾಜ್ ಸಂಗ್ರಹದಲ್ಲಿ ಮೊದಲನೆಯದು ಯಮಹಾ ಆರ್ಎಕ್ಸ್ 100 ಬೈಕು. ಇನ್ನು ಇವರು ಸಿನಿಮಾದಲ್ಲಿ ಬಳಕೆ ಮಾಡಲು ಈ ಎಲ್ಲಾ ಬೈಕ್​ಗಳನ್ನು ಬಾಡಿಗೆಗೆ ನೀಡುತ್ತಾರೆ.

ABOUT THE AUTHOR

...view details