ಕರ್ನಾಟಕ

karnataka

ETV Bharat / bharat

ಬರೀ ಇಪ್ಪತ್ತು ರೂಪಾಯಿಗಾಗಿ ಇಡ್ಲಿ ವ್ಯಾಪಾರಿಯನ್ನೇ ಕೊಂದ ಗ್ರಾಹಕರು - ಥಾಣೆ ಅಪರಾಧ ಸುದ್ದಿ

ಥಾಣೆ ಜಿಲ್ಲೆಯ ಮೀರಾ ರಸ್ತೆಯ ಇಡ್ಲಿ ಮಾರಾಟ ಮಾಡುತ್ತಿದ್ದ ವೀರೇಂದ್ರ ಯಾದವ್ ಎಂಬುವನನ್ನು ಮೂವರು ಗ್ರಾಹಕರು ಹತ್ಯೆ ಮಾಡಿ ಪರಾರಿ ಆಗಿದ್ದಾರೆ.

killed
killed

By

Published : Feb 6, 2021, 1:30 PM IST

ಥಾಣೆ( ಮಹಾರಾಷ್ಟ್ರ):ಥಾಣೆ ಜಿಲ್ಲೆಯ ಮೀರಾ ರಸ್ತೆಯ ಪಕ್ಕದಲ್ಲಿ ಇಡ್ಲಿ ಮಾರಾಟಗಾರನನ್ನು 26 ವರ್ಷದವನನ್ನು ಮೂವರು ಅಪರಿಚಿತ ಗ್ರಾಹಕರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದವನನ್ನು ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದ್ದು, ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದ. ಶುಕ್ರವಾರ ಮೂವರು ಗ್ರಾಹಕರು ಬಂದು 20 ರೂ. ಬಾಕಿ ಇದೆ ಎಂದು ಗಲಾಟೆ ತೆಗೆದು ಹತ್ಯೆ ಮಾಡಲಾಗಿದೆ ಎಂದು ಹೇಳಿದರು.

ಈ ಮೂವರು ಸೇರಿ ಮಾರಾಟಗಾರನನ್ನು ಥಳಿಸಿದ್ದಾರೆ. ಬಲವಾಗಿ ನೂಕಿದ್ದರಿಂದಾಗಿ ಆತ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಯಿತು. ಅಲ್ಲಿ ನೆರೆದವರು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಎಟಿಎಂನಲ್ಲಿ ಹಣ ತೆಗೆದುಕೊಡುವುದಾಗಿ ಕಾರ್ಡ್ ಪಡೆದು ಎಸ್ಕೇಪ್: ಆರೋಪಿ ಬಂಧನ

ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೀರಾ ರಸ್ತೆಯ ನಯಾ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೀರಾ ಭಯಂದರ್-ವಾಸೈ ವಿರಾರ್ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ABOUT THE AUTHOR

...view details