ಕರ್ನಾಟಕ

karnataka

ETV Bharat / bharat

ವೈದ್ಯ ದಂಪತಿ ಕೊಲೆ ಪ್ರಕರಣ: ತಂಗಿ-ಸೋದರಳಿಯನ ಸಾವಿಗೆ ಸೇಡು ತೀರಿಸಿಕೊಂಡ ಅಣ್ಣ! - ವೈದ್ಯ ದಂಪತಿ ಕೊಲೆ ಪ್ರಕರಣದ ಆರೋಪಿಗಳ ಗುರುತು ಪತ್ತೆ

ವೈದ್ಯ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಗುರುತು ಪತ್ತೆಯಾಗಿದ್ದು, ತಂಗಿ ಮತ್ತು ಸೋದರಳಿಯ ಸಾವಿಗೆ ಕಾರಣರಾದವರ ವಿರುದ್ಧ ಸಹೋದರ ಸೇಡು ತೀರಿಸಿಕೊಂಡಂತಿದೆ.

Bharatpur Police News  Bharatpur latest news  Doctor couple shot dead in Bharatpur  Doctor couple shot dead  Doctor couple murdered in Rajasthan  Doctor couple murdered in Bharatpur  Rajasthan News  Bharatpur News  ವೈದ್ಯ ದಂಪತಿ ಕೊಲೆ ಪ್ರಕರಣ  ವೈದ್ಯ ದಂಪತಿ ಕೊಲೆ ಪ್ರಕರಣ ಸುದ್ದಿ  ತಂಗಿ ಮತ್ತು ಸೋದರಳಿಯ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಂಡ ಅಣ್ಣ  ವೈದ್ಯ ದಂಪತಿ ಕೊಲೆ ಪ್ರಕರಣದ ಆರೋಪಿಗಳ ಗುರುತು ಪತ್ತೆ  ಭರತ್​ಪುರ ಅಪರಾಧ ಸುದ್ದಿ
ತಂಗಿ, ಸೋದರಳಿಯ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಂಡ ಅಣ್ಣ

By

Published : May 29, 2021, 1:59 PM IST

Updated : May 29, 2021, 3:33 PM IST

ಭರತ್​ಪುರ:ನಡು ರಸ್ತೆಯಲ್ಲೆ ವೈದ್ಯ ದಂಪತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆಗೆ ಹೊಸ ಟ್ವಿಸ್ಟ್​ ಸಿಕ್ಕಿದ್ದು, ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಶುಕ್ರವಾರ ಮಟ ಮಟ ಮಧ್ಯಾಹ್ನದ ವೇಳೆ ಕಾರಿನಲ್ಲಿ ತೆರಳುತ್ತಿದ್ದ ವೈದ್ಯ ದಂಪತಿಯನ್ನು ಅಡ್ಡಗಟ್ಟಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಮಾಡಿ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಎರಡು ವರ್ಷಗಳ ಹಿಂದೆ ಸೂರ್ಯ ನಗರದ ಮನೆಯೊಂದರಲ್ಲಿ 6 ವರ್ಷದ ಮಗುವಿನೊಂದಿಗೆ ಜೀವಂತವಾಗಿ ಸುಟ್ಟುಹೋದ ದೀಪಾ ಗುರ್ಜಾರ್ ಸಹೋದರ ತನ್ನ ಸ್ನೇಹಿತನೊಂದಿಗೆ ವೈದ್ಯ ದಂಪತಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

(ಕಾರಿನಲ್ಲಿದ್ದ ಡಾಕ್ಟರ್​ ದಂಪತಿಗೆ ನಡು ರಸ್ತೆಯಲ್ಲೇ ಗುಂಡಿಟ್ಟು ಹತ್ಯೆ!​)

ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆ

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವೈದ್ಯ ದಂಪತಿಗೆ ಗುಂಡಿಕ್ಕಿ ಕೊಂದ ಆರೋಪಿಗಳನ್ನು ಗುರುತಿಸಲಾಗಿದೆ. ಕೊಲೆ ಆರೋಪಿಗಳಲ್ಲೊಬ್ಬ ದೀಪಾ ಗುರ್ಜಾರ್ ಅವರ ಸಹೋದರ ಅನುಜ್, ಮತ್ತೊಬ್ಬ ಆರೋಪಿ ಧೋಲ್ಪುರ್ ನಿವಾಸಿ ಮಹೇಶ್ ಎಂದು ಭರತ್‌ಪುರ ಐಜಿ ಪ್ರಸನ್ನ ಕುಮಾರ್ ಖಮೇಸ್ರಾ ತಿಳಿಸಿದ್ದಾರೆ.

ತಂಗಿ, ಸೋದರಳಿಯ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಂಡ ಅಣ್ಣ

ಐಜಿ ಹೇಳಿದ್ದೇನು?

ಆರೋಪಿಗಳಿಬ್ಬರ ಪತ್ತೆಗೆ ಶೋಧ ನಡೆಯುತ್ತಿದೆ. ಇಬ್ಬರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಸಹೋದರಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿದೆ. ವಿಚಾರಣೆ ಬಳಿಕ ಆಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಐಜಿ ಪ್ರಸನ್ನ ಕುಮಾರ್ ಖಮೇಸ್ರಾ ಹೇಳಿದರು.

ಸೇಡಿಗೆ ಸೇಡು...

7 ನವೆಂಬರ್ 2019ರಂದು ನಗರದ ಸೂರ್ಯ ಸಿಟಿ ಕಾಲೋನಿಯ ಮನೆಯೊಂದರಲ್ಲಿ ದೀಪಾ ಗುರ್ಜರ್ ಮತ್ತು ಅವರ 6 ವರ್ಷದ ಮಗುವನ್ನು ಸುಟ್ಟುಹಾಕಲಾಗಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿಗಳು ಈ ಕೊಲೆ ಮಾಡಿದ್ದಾರೆ ಎಂದು ಐಜಿ ಹೇಳಿದ್ದಾರೆ.

ತಂಗಿ, ಸೋದರಳಿಯ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಂಡ ಅಣ್ಣ

ಇದು ಇಡೀ ಪ್ರಕರಣ...

ಶ್ರೀರಾಮ್ ಆಸ್ಪತ್ರೆಯ ನಿರ್ದೇಶಕ ಡಾ. ಸುದೀಪ್ ಗುಪ್ತಾ ಮತ್ತು ಅವರ ಪತ್ನಿ ಡಾ. ಸೀಮಾ ಗುಪ್ತಾ ತಮ್ಮ ಕಾರಿನಿಂದ ಹಿರಾಡಾಸ್ ಕಡೆಗೆ ಶುಕ್ರವಾರ ಸಂಜೆ 4.30ಕ್ಕೆ ಕಾಳಿ ಬಾಗ್ಚಿ ಪ್ರದೇಶದಲ್ಲಿ ಹೋಗುತ್ತಿದ್ದರು. ನಂತರ ಬೈಕ್​ ಸವಾರರು ಬಂದು ವೈದ್ಯ ದಂಪತಿ ಕಾರ್​ ಅಡ್ಡಗಟ್ಟಿ ವೈದ್ಯರ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಡಾ. ಸುದೀಪ್ ಗುಪ್ತಾ ತಲೆಗೆ ಮತ್ತು ಅವರ ಪತ್ನಿ ಡಾ. ಸೀಮಾ ಎದೆಗೆ ಗುಂಡು ತಗುಲಿತ್ತು. ಇಬ್ಬರನ್ನೂ ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ವೈದ್ಯರು ದಂಪತಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ನವೆಂಬರ್​ 7ರಂದು ನಡೆದಿದ್ದೇನು?

ಡಾ. ಸುದೀಪ್ ಗುಪ್ತಾ​ ಮತ್ತು ಡಾ. ಸೀಮಾ ಗುಪ್ತಾ ವೈದ್ಯರಾಗಿದ್ದು, ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದ್ರೆ ಡಾ. ಸುದೀಪ್ ತನ್ನ ಕ್ಲಿನಿಕ್​ನಲ್ಲಿರುವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನ ಸೀಮಾಗೆ ಕಾಡುತ್ತಿತ್ತು.

ಸೂರ್ಯ ನಗರದ ಪೊಶ್​ ನಗರದಲ್ಲಿ ಆ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗ ವಾಸವಿದ್ದರು. 2019 ನವೆಂಬರ್​ 7ರಂದು ಸೀಮಾ ಮತ್ತು ಆಕೆಯ ಅತ್ತೆ ಆ ಮಹಿಳೆ ಮನೆಗೆ ತೆರಳಿ ಮನೆಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದರು ಎನ್ನಲಾಗ್ತಿದೆ. ಈ ಘಟನೆಯಲ್ಲಿ ತಾಯಿ-ಮಗು ಇಬ್ಬರು ಸಾವನ್ನಪ್ಪಿದ್ದರು.

ತನ್ನ ಸಹೋದರಿ ಮತ್ತು ಸೋದರಳಿಯ ಸಾವಿಗೆ ಕಾರಣರಾಗಿದ್ದವರ ವಿರುದ್ಧ ಸಹೋದರ ಅನುಜ್​ ಆತನ ಸ್ನೇಹಿತ ಮಹೇಶ್​ ಜೊತೆ ಸೇರಿ ದಂಪತಿಯನ್ನು ನಡು ರಸ್ತೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಸಂಪೂರ್ಣ ತನಿಖೆ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ.

Last Updated : May 29, 2021, 3:33 PM IST

ABOUT THE AUTHOR

...view details