ಹೈದರಾಬಾದ್ :ICRISAT ಕ್ಯಾಂಪಸ್ನ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ 50ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಕೇಂದ್ರ ಬಜೆಟ್ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದಿರುವ ಅವರು, ಡಿಜಿಟಲ್ ಕೃಷಿಯತ್ತ ನಮ್ಮ ಗುರಿ ಎಂದರು.
50 ವರ್ಷಗಳ ಕಾಲ ವಿವಿಧ ಬೆಳೆಗಳ ಬಗೆಗಿನ ನಿಮ್ಮ ಸಂಶೋಧನೆಗೆ ಅಭಿನಂದನೆಗಳು. ಐದು ದಶಕಗಳ ಅವಧಿಯಲ್ಲಿ ಭಾರತ ಕೃಷಿಯಲ್ಲಿ ಸಮೃದ್ಧಿ ಸಾಧಿಸಿದ್ದು, ಮುಂದಿನ 50 ವರ್ಷಗಳಲ್ಲಿ ಹೆಚ್ಚಿನ ಸಂಶೋಧನೆ ಹೊರಬರಲಿ ಎಂದು ನಾನು ಬಯಸುತ್ತೇನೆ. ಕಡಿಮೆ ನೀರಿನಿಂದ ಹೆಚ್ಚಿನ ಬೆಳೆ ಬೆಳೆಯಬೇಕು. ICRISAT ಸಂಶೋಧನೆಗಳು ಜಗತ್ತಿಗೆ ಹೊಸ ಮಾರ್ಗ ತೋರಿಸಲಿ ಎಂದು ನಾನು ಭಾವಿಸುತ್ತೇನೆ ಎಂದರು.
2022-23ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ನಾವು ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಕೃಷಿಯಲ್ಲಿ ಹೆಚ್ಚಿನ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದ್ದು, ಇದೀಗ ಡಿಜಿಟಲ್ ಕೃಷಿಯತ್ತ ಗುರಿ ಹೊಂದಿದ್ದೇವೆ. ಕೃಷಿಯಲ್ಲಿ ಡ್ರೋನ್ ಬಳಕೆಗೆ ಈಗಾಗಲೇ ಹಣ ಮಂಜೂರು ಮಾಡಲಾಗಿದ್ದು, ಸಾಗುವಳಿ ಭೂಮಿ ಡಿಜಿಟಲೀಕರಣಗೊಳ್ಳುತ್ತಿದೆ.