ನವದೆಹಲಿ :ಕೋವಿಡ್‌ನ ಎರಡು ಡೋಸ್ ಪಡೆದವರಲ್ಲಿ ಮರಣ ಪ್ರಮಾಣವು ಶೇ.95ರಷ್ಟು ಕಡಿಮೆಯಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಚಾಲ್ತಿಯಲ್ಲಿರುವ ಡೆಲ್ಟಾ ರೂಪಾಂತರದಲ್ಲಿಯೂ ಸಹ ಕೋವಿಡ್ ಸಾವುಗಳು ಶೇ.95ರಷ್ಟು ಕಡಿಮೆಯಾಗಿವೆ. ತಮಿಳುನಾಡಿನಲ್ಲಿ ಸುಮಾರು 17 ಲಕ್ಷ 524 ಪೊಲೀಸ್ ಸಿಬ್ಬಂದಿ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ ಎಂದು ಹೇಳಿದೆ.
ಈ ಪೈಕಿ 17,000 ಜನರು ಲಸಿಕೆಯಿಂದ ದೂರವಾಗಿದ್ದಾರೆ. 32,792 ಮಂದಿ ಒಂದು ಡೋಸ್ ಮತ್ತು 67,673 ಎರಡು ಡೋಸ್ ತೆಗೆದುಕೊಂಡಿದ್ದಾರೆ. ಈ ಪೈಕಿ 20 ಪೊಲೀಸರು ವ್ಯಾಕ್ಸಿನೇಷನ್ ಇಲ್ಲದೆ ಸಾವನ್ನಪ್ಪಿದ್ದಾರೆ. ಒಂದು ಡೋಸ್ ತೆಗೆದುಕೊಂಡ ನಂತರ ಏಳು ಮಂದಿ ಸಾವನ್ನಪ್ಪಿದ್ದಾರೆ. ಎರಡು ಡೋಸ್ ತೆಗೆದುಕೊಂಡ ನಂತರ ಕೇವಲ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಐಸಿಎಂಆರ್ ವರದಿ ತಿಳಿಸಿದೆ.