ನವದೆಹಲಿ:ಆಮ್ಲಜನಕ ಮಟ್ಟ ಕುಸಿತದಿಂದ ವಿಜೂ ವಿಜಯನ್ (32) ಮತ್ತು ಆತನ ತಂದೆ ವಿ ವಿಜಯಾನ್ (70) ನೋಯ್ಡಾ ಆಸ್ಪತ್ರೆಗೆ ದಾಖಲಾಗಿದ್ದು. ಅವರ ಕುಟುಂಬ ಸದಸ್ಯರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳುತ್ತಾರೆ ಎಂದು ಎದುರು ನೋಡುತ್ತಿದ್ದರು. ಕೆಲವು ದಿನಗಳ ಆಸ್ಪತ್ರೆಯಲ್ಲಿ ಕಳೆದ ನಂತರ ತಂದೆ ಮತ್ತು ಮಗ ಜೀವನದ ಅಂತಿಮ ಯಾತ್ರೆ ಮುಗಿಸಿದರು. ಅದೇ ರೀತಿ ನೋಯ್ಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 36 ವರ್ಷದ ಸುಶೀಲ್ ಶರ್ಮಾ ತಮ್ಮ ಇಬ್ಬರು ಅಪ್ರಾಪ್ತ ಮಕ್ಕಳು ಮತ್ತು ಹೆಂಡತಿಯನ್ನು ಬಿಟ್ಟು ಅಗಲಿದರು.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ನಿರಾಲಾ ಎಸ್ಟೇಟ್ ವಸತಿ ಸಮುಚ್ಚಯದಲ್ಲಿ ಅನೇಕ ಕುಟುಂಬಗಳು ಇದೇ ರೀತಿಯ ಪರಿಸ್ಥಿತಿ ಒಳಗಾಗಿವೆ. ಕಳೆದ 10-14 ದಿನಗಳಲ್ಲಿ 11ಕ್ಕೂ ಹೆಚ್ಚು ಜನರು ಸೋಂಕಿಗೆ ಸಾವನ್ನಪ್ಪಿದ್ದಾರೆ. ಕೋವಿಡ್ -19ರ ಎರಡನೇ ಅಲೆ ಉಂಟು ಮಾಡಿದ ಜೀವ ಹಾನಿ ಇಂತಹ ಅನೇಕ ಹೃದಯ ವಿದ್ರಾವಕ ಕಥೆಗಳು ಭಾರತದಾದ್ಯಂತ ಕಂಡು ಬರುತ್ತಿವೆ.
ಬೇರೆ ದೇಶಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕಡಿಮೆಯೇ?
ಕೋವಿಡ್ ಎರಡನೇ ಅಲೆಯು ಕೆಲವು ರಾಜ್ಯಗಳಲ್ಲಿ ಅತ್ಯಧಿಕ ಮಾರಕವೆಂಬುದು ಸಾಬೀತಾಗಿದೆ. ಆದರೂ ವೈರಸ್‌ನಿಂದ ಭಾರತದ ಸಾವಿನ ಪ್ರಮಾಣ ಇತರ ದೇಶಗಳಿಗಿಂತ ತುಲನಾತ್ಮಕವಾಗಿ ನೋಡಿದರೆ ಸ್ವಲ್ಪ ಕಡಿಮೆಯಾಗಿದೆ.
ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈಟಿವಿ ಭಾರತ ಜತೆ ಮಾತನಾಡಿದ್ದು, ವೈರಸ್ ವೇಗವಾಗಿ ಹರಡುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ವಿದೇಶಿ ರೂಪಾಂತರಗಳಿಂದಾಗಿ ಪ್ರಸ್ತುತ ಉಲ್ಬಣ ಮತ್ತು ಸಾವುಗಳು ಸಂಭವಿಸುತ್ತಿವೆ ಎಂದಲ್ಲ. ಈಗಿನ ಪರಿಸ್ಥಿತಿಗೆ ಅನೇಕ ಕಾರಣಗಳಿವೆ ಎನ್ನುತ್ತಾರೆ ಐಸಿಎಂಆರ್ ವಕ್ತಾರ ಡಾ.ಲೋಕೇಶ್.