ಕರ್ನಾಟಕ

karnataka

ETV Bharat / bharat

ಚಾರ್ಟರ್ಡ್‌ ಅಕೌಂಟೆಂಟ್‌ (CA) ಪರೀಕ್ಷೆ 2021ರ ನೋಂದಣಿ ದಿನಾಂಕ ವಿಸ್ತರಣೆ - ಐಸಿಎಐ ಸಿಎ ಪರೀಕ್ಷೆ 2021

ಸಿಎಂ ಪರೀಕ್ಷೆಯ ನೋಂದಣಿ ದಿನಾಂಕವನ್ನು ಆಗಸ್ಟ್ 16, 2021 ರವರೆಗೆ ವಿಸ್ತರಿಸಲಾಗಿದೆ. ಅಧಿಕೃತ ಸೂಚನೆಯನ್ನು ಆಗಸ್ಟ್ 7, 2021 ರಂದು ಬಿಡುಗಡೆ ಮಾಡಲಾಗಿದೆ. ಆ ಸೂಚನೆಯ ಪ್ರಕಾರ, ಪರೀಕ್ಷೆಗೆ ಹಾಜರಾಗಲು ಕಾಲಾವಧಿ ವಿಸ್ತರಿಸಲಾಗಿದೆ.

ICAI Extends Registration Date For December Session Exam
ಐಸಿಎಐ ಸಿಎ ಪರೀಕ್ಷೆ 2021 ರ ನೋಂದಣಿ ದಿನಾಂಕ ವಿಸ್ತರಣೆ

By

Published : Aug 8, 2021, 6:31 PM IST

ನವದೆಹಲಿ: ಐಸಿಎಐ ಸಿಎ ಪರೀಕ್ಷೆ 2021 (ಇನ್​ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್) ನೋಂದಣಿ ದಿನಾಂಕವನ್ನು ನೋಂದಣಿ ದಿನಾಂಕವನ್ನು ಆಗಸ್ಟ್ 16, 2021 ರವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ icaiexam.icai.org ಗೆ ಭೇಟಿ ನೀಡಬಹುದು.

ಈ ಕುರಿತ ಅಧಿಕೃತ ಸೂಚನೆಯನ್ನು ಆಗಸ್ಟ್ 7, 2021 ರಂದು ಬಿಡುಗಡೆ ಮಾಡಲಾಗಿದೆ. ಆ ಸೂಚನೆಯ ಪ್ರಕಾರ, ಪರೀಕ್ಷೆಗೆ ಹಾಜರಾಗಲು ಕಾಲಾವಧಿ ವಿಸ್ತರಿಸಲಾಗಿದೆ. ಡಿಸೆಂಬರ್ 2021 ರಲ್ಲಿ ಪರೀಕ್ಷೆ ನಡೆಯಲಿದೆ.

ಫೌಂಡೇಶನ್ ಕೋರ್ಸ್‌ಗೆ ವಿದ್ಯಾರ್ಥಿಗಳು ಅಗತ್ಯ ದಿನಾಂಕದಂದು ಅಥವಾ ಅದಕ್ಕೂ ಮೊದಲು ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಆಗಸ್ಟ್ 16, 2021 ರ ಮೊದಲು ಅರ್ಜಿ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ICAI CA ಪರೀಕ್ಷೆ 2021 ರ ಪ್ರಮುಖ ದಿನಾಂಕಗಳು:

  • ಐಸಿಎಐ ಸಿಎ ಡಿಸೆಂಬರ್: ನೋಂದಣಿಯ ಕೊನೆಯ ದಿನಾಂಕ ಆಗಸ್ಟ್ 16, 2021
  • ಪರೀಕ್ಷೆ ನಡೆಯುವ ತಿಂಗಳು: ಡಿಸೆಂಬರ್ 2021

ICAI CA ಪರೀಕ್ಷೆ 2021: ಹೇಗೆ ಅರ್ಜಿ ಸಲ್ಲಿಸಬೇಕು?

  • ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
  • CA ಪೋರ್ಟಲ್ ಮೇಲೆ ಕ್ಲಿಕ್ ಮಾಡಿ
  • ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು
  • ಅರ್ಜಿ ನಮೂನೆಗೆ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು
  • ಅಭ್ಯರ್ಥಿಗಳು ನಮೂನೆಯ ಪ್ರತಿಯನ್ನು ಇಟ್ಟುಕೊಳ್ಳಬೇಕು

ಇದನ್ನೂ ಓದಿ:ಆರ್ಥಿಕ ಸಂಕಷ್ಟ ತಾಳಲಾರದೆ ತಾಯಿಯ ಪರದಾಟ: ಪುಟ್ಟ ಮಗು ಕೊಂದು ಆತ್ಮಹತ್ಯೆಗೆ ಯತ್ನ

ABOUT THE AUTHOR

...view details