ದೇಶದ ವಿವಿಧ ಬ್ಯಾಂಕಿಂಗ್ ವಲಯದಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅರ್ಜಿ ಆಹ್ವಾನಿಸಿದೆ. ಪ್ರಾದೇಶಿಕ ಬ್ಯಾಂಕಿಂಗ್ ವಲಯದಲ್ಲಿ (ಆರ್ಆರ್ಬಿ) ನಡೆಯುತ್ತಿರುವ ಈ ನೇಮಕಾತಿಯಲ್ಲಿ ಒಟ್ಟು 8594 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ 606 ಮತ್ತು ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ನ ಒಟ್ಟು 200 ಹುದ್ದೆಗಳ ಭರ್ತಿಗೂ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಜೂನ್ 21 ಕಡೆಯ ದಿನವಾಗಿದೆ.
ಹುದ್ದೆ ವಿವರ: ಐಬಿಪಿಎಸ್ನ ಆರ್ಆರ್ಬಿ ಹುದ್ದೆಗಳ ಭರ್ತಿ ನಡೆಯಲಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನ 606 ಹುದ್ದೆ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ 200 ಹುದ್ದೆಗಳ ಭರ್ತಿ ನಡೆಯಲಿದೆ.
ಕರ್ನಾಟಕ ಪ್ರಾದೇಶಿಕ ಬ್ಯಾಂಕ್ನಲ್ಲಿ ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) 450 ಹುದ್ದೆ, ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್)- 350 ಹುದ್ದೆ, ಆಫೀಸರ್ ಸ್ಕೇಲ್ 2- 4 (ಕಾನೂನು), ಆಫೀಸರ್ ಸ್ಕೇಲ್ 2 (ಸಿಎ)- 2 ಹುದ್ದೆಗಳ ಭರ್ತಿ ನಡೆಯಲಿದೆ.
ವಿದ್ಯಾರ್ಹತೆ:
- ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗೆ ಪದವಿ,
- ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) - ಪದವಿ,
- ಆಫೀಸರ್ ಸ್ಕೇಲ್ 2- 4 (ಕಾನೂನು)- ಎಲ್ಎಲ್ಬಿ,
- ಆಫೀಸರ್ ಸ್ಕೇಲ್ 2 (ಸಿಎ)- 2 - ಸಿಎ
ವಯೋಮಿತಿ:
- ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗೆ 18 ರಿಂದ 28 ವರ್ಷ,
- ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) - 18 ರಿಂದ 30 ವರ್ಷ,
- ಆಫೀಸರ್ ಸ್ಕೇಲ್ 2- 4 (ಕಾನೂನು)- 18 ರಿಂದ 30 ವರ್ಷ,
- ಆಫೀಸರ್ ಸ್ಕೇಲ್ 2 (ಸಿಎ)- 2 - 21 ರಿಂದ 32 ವರ್ಷ