ಡೆಹ್ರಾಡೂನ್ (ಉತ್ತರಾಖಂಡ್): ದೇಶದಲ್ಲಿ ಐಎಎಸ್ ಅಧಿಕಾರಿಗಳ ಜೀವನವನ್ನು ನಾವು ಬಹಳ ಐಷಾರಾಮಿ ಆಗಿ ಯೋಚಿಸಿರುತ್ತೇವೆ. ಆದರೆ ಉತ್ತರಾಖಂಡ್ ರಾಜ್ಯದ 2004ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪುರುಷೋತ್ತಮ್ ಅವರು ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ಇವರು ಕಾರಿನ ಬದಲು ಸೈಕಲ್‌ನಲ್ಲಿ ಸಂಚರಿಸಿ ಸುದ್ದಿಯಾಗಿದ್ದಾರೆ.
ಐಎಎಸ್ ಅಧಿಕಾರಿ ಪುರುಷೋತ್ತಮ್ ಅವರು ಜನತೆಗೆ ಈ ಮೂಲಕ ಉತ್ತಮ ಸಂದೇಶವನ್ನು ನೀಡಿದ್ದಾರೆ. ಇದು ಪರಿಸರಕ್ಕೆ ಮಾತ್ರವಲ್ಲದೇ ಜನರ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ದೇಶದ ಪ್ರಧಾನಿಯ ನರೇಂದ್ರ ಮೋದಿ ಕೂಡ ಸೈಕಲ್ ಸವಾರಿಯ ಲಾಭವನ್ನು ಹೇಳುತ್ತಿರುತ್ತಾರೆ. ಇದೀಗ ಐಎಎಸ್ ಅಧಿಕಾರಿ ಬಿ.ವಿ.ಆರ್.ಸಿ ಪುರುಷೋತ್ತಮ್ ಅದನ್ನು ಅವರ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.