ನವದೆಹಲಿ/ಗಾಜಿಯಾಬಾದ್: ತನ್ನ ಮಗಳ ಮೇಲೆ ಲವ್ ಜಿಹಾದ್ ನಡೆಸಲಾಗಿದೆ ಎಂದು ಆರೋಪಿಸಿ ಐಎಎಸ್ ಅಧಿಕಾರಿಯೊಬ್ಬರು ಗಾಜಿಯಾಬಾದ್ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿರುವ ಸೆಕ್ರೆಟರಿಯೇಟ್ನಲ್ಲಿ ಅಧಿಕಾರಿ ಕೆಲಸ ಮಾಡ್ತಿದ್ದು, ಯುವಕನೊಬ್ಬನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ತನ್ನ ಮಗಳೊಂದಿಗೆ ಲವ್ ಜಿಹಾದ್ ನಡೆಸಲಾಗಿದೆ ಎಂದು ಆರೋಪ ಮಾಡಿರುವ ಐಎಎಸ್ ಅಧಿಕಾರಿ, ಅಬ್ದುಲ್ ರೆಹಮಾನ್ ಎಂಬಾತನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅಧಿಕಾರಿ ನೀಡಿರುವ ದೂರಿನ ಆಧಾರದ ಮೇಲೆ ಆತನ ವಿರುದ್ಧ ಪೊಲೀಸರು ವಂಚನೆ ಮಾಡಿರುವ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಮಗಳು ಮೀರತ್ನಲ್ಲಿ ವಾಸವಾಗಿರುವ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದು, ಲವ್ ಜಿಹಾದ್ ಹೆಸರಿನಲ್ಲಿ ಆಕೆ ಜೊತೆ 2017ರಲ್ಲಿ ಮದುವೆ ಮಾಡಿಕೊಂಡಿದ್ದಾಗಿ ಆರೋಪ ಮಾಡಿದ್ದಾರೆ. ಜೊತೆಗೆ ಅವರು ಮದುವೆ ನೋಂದಣಿ ಮಾಡಿಕೊಂಡಿರುವ ಸಂಸ್ಥೆ ವಿರುದ್ಧ ಸಹ ದೂರು ದಾಖಲು ಮಾಡಿದ್ದಾರೆ.