ಲಖನೌ( ಉತ್ತರಪ್ರದೇಶ): ಗಂಡ - ಹೆಂಡ್ತಿಯ ಜಗಳ ಉಂಡು ಮಲಗುವವರೆಗೂ ಮಾತ್ರ ಅಂತಾರೆ. ಆದರೆ, ಈ ಐಎಎಸ್ ದಂಪತಿ ಜಗಳ ಬೆಡ್ ರೂಂನಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆದರೆ, ಮಹಿಳಾ ಐಎಎಸ್ ಅಧಿಕಾರಿ 32 ವರ್ಷಗಳ ಕಾಲ ತಾನೂ ಅನುಭವಿಸಿರುವ ಕಷ್ಟಗಳ ಬಗ್ಗೆ ಎಳೆ ಎಳೆಯಾಗಿ ದೂರಿನ ಮೂಲಕ ಬಿಚ್ಚಿಟ್ಟಿದ್ದಾರೆ.
ರಾಜ್ಯದ ಪ್ರಮುಖ ಹುದ್ದೆಯಲ್ಲಿರುವ ಹಿರಿಯ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮೇ 5, 1990 ರಂದು ವಿವಾಹವಾಗಿದ್ದಾರೆ. ಅದೆಷ್ಟೋ ಕನಸುಗಳನ್ನು ಹೊತ್ತು ಗಂಡನ ಮನೆಗೆ ತೆರಳಿದ್ದ ಆ ಮಹಿಳೆಗೆ ಮೊದಲನೇ ರಾತ್ರಿಯಲ್ಲೇ ತನ್ನ ಗಂಡ ದೈಹಿಕ ಅಸಮರ್ಥ ಎಂಬುದು ಅರಿವಾಗಿದೆ. ಅಂದಿನಿಂದ ಆಕೆಯ ಪತಿ ಕಿರುಕುಳ ನೀಡಲಾರಂಭಿಸಿದ್ದಾನೆ.
ಇಷ್ಟೇ ಅಲ್ಲದೆ ಆ ಪತಿರಾಯ ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ತನ್ನ ಪತ್ನಿಗೆ ಬೆದರಿಕೆ ಹಾಕುತ್ತಿದ್ದನಂತೆ. ಅಷ್ಟೇ ಅಲ್ಲದೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನೆಂದು ಮಹಿಳಾ ಅಧಿಕಾರಿ ಆರೋಪಿಸಿ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಓದಿ:ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ.. ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಫೈಜರ್!
ಒಂದು ದಿನ ನನ್ನ ಪತಿ ನನ್ನ ಕೈಯನ್ನು ಮುರಿಯಲು ಪ್ರಯತ್ನಿಸಿದನು. ಅಷ್ಟೇ ಅಲ್ಲ ಆರ್ಥಿಕವಾಗಿಯೂ ಶೋಷಣೆಗೆ ಒಳಗಾಗಿದ್ದೇನೆ. ನನ್ನ ಪತಿ ನನ್ನನ್ನು ಆರ್ಥಿಕವಾಗಿ ಬಳಸಿಕೊಳ್ಳುತ್ತಿದ್ದ. ಸಂಬಳ ಪಡೆಯಲು ಸಹ ನನಗೆ ಬಿಡುತ್ತಿರಲಿಲ್ಲ. ಮನೆ ಖರ್ಚಿಗೆ ಕೇವಲ 6 ಸಾವಿರ ರೂಪಾಯಿ ನೀಡುತ್ತಿದ್ದರು. ಹೆಚ್ಚು ಹಣ ಕೇಳಿದಲ್ಲಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2015ರಲ್ಲಿ ಸಂಬಳದ ಖಾತೆಯನ್ನು ರಿಗ್ಗಿಂಗ್ ಮಾಡಿ ಪತಿ ಹೆಸರು ಸೇರಿಸಿದ್ದರು. ನಕಲಿ ಸಹಿ ಮಾಡಿ ಹಲವು ವಹಿವಾಟುಗಳನ್ನೂ ನಡೆಸಿದ್ದಾರೆ. ಇದರೊಂದಿಗೆ ನಕಲಿ ಇಮೇಲ್ ಐಡಿ ಸೃಷ್ಟಿಸಿ ನನ್ನ ಸಹೋದರನಿಂದ ಐದು ಲಕ್ಷ ಪಡೆದಿದ್ದಾರೆ. ನನ್ನ ಪತಿ ಕೊರೊನಾದಿಂದ ಬಳಲುತ್ತಿದ್ದರೂ ಈ ವಿಷಯವನ್ನು ಮರೆಮಾಚಿದ್ದರು. ಇದರಿಂದಾಗಿ ಆಕೆಯ ತಾಯಿಗೂ ಸಹ ಕೊರೊನಾ ದೃಢಪಟ್ಟಿತ್ತು ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ಮಹಿಳಾ ಐಎಎಸ್ ದೂರಿನ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಬಾಲ ಪ್ರಸಾದ್ ಅವಸ್ತಿ ವಿರುದ್ಧ ಕೌಟುಂಬಿಕ ದೌರ್ಜನ್ಯ, ವಂಚನೆ ಮತ್ತು ಐಟಿ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ