ಕರ್ನಾಟಕ

karnataka

ETV Bharat / bharat

ಸೇನಾ ಹೆಲಿಕಾಪ್ಟರ್​ ದುರಂತದ ತನಿಖೆ: ಮಾಹಿತಿ ಇಲ್ಲದೇ ಊಹಾಪೋಹ ಹರಡಬೇಡಿ ಎಂದು IAF ಮನವಿ - IAF tweet on chopper crash

ಹೆಲಿಕಾಪ್ಟರ್ ದುರಂತ ತನಿಖೆ ಮಾಡಲು IAF ತ್ರಿ - ಸೇವಾ ನ್ಯಾಯಾಲಯವನ್ನು ಸ್ಥಾಪಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಮತ್ತು ಸತ್ಯಗಳನ್ನು ಹೊರತರಲಾಗುವುದು. ಅಲ್ಲಿಯವರೆಗೆ, ಯಾರೂ ಮಾಹಿತಿಯಿಲ್ಲದೇ ಊಹಾಪೋಹಗಳು ಬಿತ್ತಬಾರದು ಎಂದು IAF ಟ್ವಿಟರ್‌ನಲ್ಲಿ ಮನವಿ ಮಾಡಿದೆ.

iaf
ಐಎಎಫ್​

By

Published : Dec 10, 2021, 3:02 PM IST

ನವದೆಹಲಿ : ಹೆಲಿಕಾಪ್ಟರ್​ ಪತನದ ಪ್ರಕರಣವನ್ನು ತ್ರಿ-ಸೇವಾ ತನಿಖೆಗೆ ಐಎಫ್​ ಆದೇಶ ನೀಡಿದೆ. ಇದರ ಮುಂದಾಳತ್ವವನ್ನು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಸತ್ತಿಗೆ ತಿಳಿಸಿದರು. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು IAF ನ ಹಿರಿಯ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ.

General Rawat helicopter crashed : 08 ಡಿಸೆಂಬರ್ 21 ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತ ತನಿಖೆ ಮಾಡಲು IAF ತ್ರಿ-ಸೇವಾ ನ್ಯಾಯಾಲಯವನ್ನು ಸ್ಥಾಪಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಮತ್ತು ಸತ್ಯಗಳನ್ನು ಹೊರತರಲಾಗುವುದು. ಅಲ್ಲಿಯವರೆಗೆ, ಯಾರೂ ಮಾಹಿತಿಯಿಲ್ಲದೇ ಊಹಾಪೋಹಗಳು ಬಿತ್ತಬಾರದು ಎಂದು IAF ಟ್ವಿಟರ್‌ನಲ್ಲಿ ಮನವಿ ಮಾಡಿದೆ.

ಇಂದು ಸಂಜೆ ದೆಹಲಿಯಲ್ಲಿ ಸೇನಾ ಗೌರವಗಳೊಂದಿಗೆ ಜನರಲ್ ರಾವತ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೇಂದ್ರ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಹಲವು ಪ್ರಮುಖ ನಾಯಕರು ಜನರಲ್​ ರಾವತ್​ ಅವರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.

ABOUT THE AUTHOR

...view details