ನವದೆಹಲಿ: ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಅವರನ್ನು ಹೊತ್ತು ಸಾಗಿದ್ದ ಭಾರತೀಯ ವಾಯುಪಡೆಯ (IAF) ವಿಮಾನವು ಈ ವಾರ ರಾಜಸ್ಥಾನದ ಬಾರ್ಮೇರ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಣಕು ತುರ್ತು ಲ್ಯಾಂಡಿಂಗ್ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಐಎಎಫ್‌ನ ಫೈಟರ್ ಜೆಟ್‌ಗಳು ಮತ್ತು ಇತರ ವಿಮಾನಗಳ ತುರ್ತು ಇಳಿಯುವಿಕೆಯನ್ನು ನಿರ್ವಹಿಸಲು ಸಿದ್ಧವಾಗಿರುವ 3.5 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಸಚಿವರು ಇದೇ ವಾರ ಉದ್ಘಾಟನೆ ಮಾಡಲಿದ್ದಾರೆ.
ಐಎಎಫ್ ವಿಮಾನಗಳ ತುರ್ತು ಇಳಿಯುವಿಕೆಗೆ ಬಳಸಿದ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ. ಅಕ್ಟೋಬರ್ 2017 ರಲ್ಲಿ, ಐಎಎಫ್‌ನ ಫೈಟರ್ ಜೆಟ್‌ಗಳು ಮತ್ತು ಸಾರಿಗೆ ವಿಮಾನಗಳು ಲಖನೌ-ಆಗ್ರಾ ಎಕ್ಸ್‌ಪ್ರೆಸ್ ವೇಯಲ್ಲಿ ಅಣಕು ಲ್ಯಾಂಡಿಂಗ್‌ಗಳನ್ನು ನಡೆಸಿದ್ದವು.
ಲಖನೌ-ಆಗ್ರಾ ಎಕ್ಸ್‌ಪ್ರೆಸ್ ವೇ ಉತ್ತರ ಪ್ರದೇಶ ಸರ್ಕಾರದ ಅಡಿಯಲ್ಲಿ ಬರುತ್ತದೆ. ಮೂಲಗಳ ಪ್ರಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು (NHAI) ಮತ್ತು ಐಎಎಫ್ ಅಧಿಕಾರಿಗಳ ಸಮನ್ವಯದಿಂದ ಬಾರ್ಮರ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಏರ್ ಸ್ಟ್ರಿಪ್ ಅಭಿವೃದ್ಧಿಪಡಿಸಲಾಗಿದೆ.