ನವದೆಹಲಿ: ಭಾರತೀಯ ವಾಯುಪಡೆಯು ತನ್ನ ವಾಯುನೆಲೆಗಳ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಲೈಟ್ ಬುಲೆಟ್ ಪ್ರೂಫ್ ವೆಹಿಕಲ್ಸ್ (ಎಲ್‌ಬಿವಿಪಿ) ಗಳನ್ನು ಸೇನೆಗೆ ಸೇರಿಸಿಕೊಂಡಿದ್ದು, ಮಿನಿ ಟ್ರಕ್‌ನಂತಿರುವ ಈ ವಾಹನಗಳನ್ನು ಇಂದು ಪ್ರದರ್ಶನಕ್ಕೆ ಇಡಲಾಗಿತ್ತು.
ವಾಯುನೆಲೆಗಳ ರಕ್ಷಣೆಗೆ ಲೈಟ್ ಬುಲೆಟ್ ಪ್ರೂಫ್ ವೆಹಿಕಲ್ಸ್ ಬಲ - Light Bullet Proof Vehicles to enhance airbase security
ಐಎಎಫ್ ತನ್ನ ವಾಯುನೆಲೆಗಳ ಸುರಕ್ಷತೆ ಹೆಚ್ಚಿಸಲು ಲೈಟ್ ಬುಲೆಟ್ ಪ್ರೂಫ್ ವಾಹನಗಳನ್ನು ಸೇರಿಸಿಕೊಂಡಿದೆ. ಈ ವಾಹನವು ಯಾವುದೇ ರೀತಿಯ ಬುಲೆಟ್ ಮತ್ತು ಗ್ರೆನೇಡ್ ದಾಳಿಯನ್ನು ತಡೆದುಕೊಳ್ಳಬಹುದು ಹಾಗೂ ಭಯೋತ್ಪಾದಕರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.
ಲೈಟ್ ಬುಲೆಟ್ ಪ್ರೂಫ್ ವೆಹಿಕಲ್ಸ್
ಆರು ಟನ್ ತೂಕದ ಎಲ್‌ಬಿಪಿವಿಗಳು ಯಾವುದೇ ರೀತಿಯ ಬುಲೆಟ್ ಮತ್ತು ಗ್ರೆನೇಡ್ ದಾಳಿಯನ್ನು ತಡೆದುಕೊಳ್ಳಬಲ್ಲವು ಮತ್ತು ಭಯೋತ್ಪಾದಕ ದಾಳಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.
ಆರು ಗರುಡ ಕಮಾಂಡೋಗಳನ್ನು ಅಥವಾ ತ್ವರಿತ ಪ್ರತಿಕ್ರಿಯೆ ತಂಡದ(ಕ್ವಿಕ್ ರಿಯಾಕ್ಷನ್ ಟೀಮ್) ಸದಸ್ಯರನ್ನು ಸಾಗಿಸಬಹುದು. ವಾಯುಪಡೆಯ ಉನ್ನತ ಕಮಾಂಡರ್‌ಗಳು ವಾಹನಗಳ ಪರಿಶೀಲನೆಗೆ ಮುಂದಾಗಿದ್ದಾರೆ.