ಕರ್ನಾಟಕ

karnataka

ETV Bharat / bharat

ಬಾಂಗ್ಲಾ ವಿಮೋಚನೆ ಯುದ್ದಕ್ಕೆ 50 ವರ್ಷ : ವಿಮಾನ ಪ್ರತಿಕೃತಿಗಳ ವಿನಿಮಯ - ಬಾಂಗ್ಲಾ ವೊಮೋಚನೆ ಯುದ್ದಕ್ಕೆ 50 ವರ್ಷ

ಭದೌರಿಯಾ ನಾಲ್ಕು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಈ ವೇಳೆ ಢಾಕಾದಲ್ಲಿ ವಿಮಾನ ಪ್ರತಿಕೃತಿಗಳ ವಿನಿಮಯ ನಡೆಯಿತು. ಅಲ್ಲಿ ಅವರು ವಿವಿಧ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು..

ಎಫ್ -86 ಯುದ್ಧ ವಿಮಾನ ಕೊಟ್ಟ ಭಾರತ
IAF gifts 1971 war helicopter to Bangladesh, gets F-86 fighter as return gift

By

Published : Feb 27, 2021, 7:06 PM IST

ಢಾಕಾ (ಬಾಂಗ್ಲಾದೇಶ) :1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದ 50 ವರ್ಷಗಳ ನೆನಪಿಗಾಗಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್​ಕೆಎಸ್​​ ಭದೌರಿಯಾ ಬಾಂಗ್ಲಾದೇಶದ ವಾಯುಪಡೆಗೆ ಪರಂಪರೆಯ ಅಲೋಯೆಟ್ III ಹೆಲಿಕಾಪ್ಟರ್ ಮಿನಿಯೇಚರ್‌ನ ಉಡುಗೊರೆಯಾಗಿ ನೀಡಿದರು. ಇದಕ್ಕೆ ಪ್ರತಿಯಾಗಿ ಢಾಕಾ ಎಫ್ -86 ಯುದ್ಧ ವಿಮಾನದ ಮಿನಿಯೇಚರ್ ಉಡುಗೊರೆಯಾಗಿ ನೀಡಿತು.

ಐಎಎಫ್ ಟ್ವೀಟ್

ಎರಡೂ ಪಾರಂಪರಿಕ ವಿಮಾನಗಳು ಎರಡೂ ಕಡೆಗಳ ವಸ್ತು ಸಂಗ್ರಹಾಲಯಗಳಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆಯುತ್ತವೆ ಎಂದು ಐಎಎಫ್ ಟ್ವೀಟ್‌ನಲ್ಲಿ ತಿಳಿಸಿದೆ.

ಓದಿ: ಹೊಸ ಐಟಿ ನಿಯಮ.. 'ಸೋಷಿಯಲ್ ಮೀಡಿಯಾ ಮಧ್ಯವರ್ತಿ' ಬಳಕೆದಾರರ ಮಿತಿ 50 ಲಕ್ಷಕ್ಕೆ ಸೀಮಿತ- ಕೇಂದ್ರ

ಭದೌರಿಯಾ ನಾಲ್ಕು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಈ ವೇಳೆ ಢಾಕಾದಲ್ಲಿ ವಿಮಾನ ಪ್ರತಿಕೃತಿಗಳ ವಿನಿಮಯ ನಡೆಯಿತು. ಅಲ್ಲಿ ಅವರು ವಿವಿಧ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು.

ಭಾರತ ಮತ್ತು ಬಾಂಗ್ಲಾದೇಶವು 50 ವರ್ಷಗಳ ವಿಮೋಚನಾ ಯುದ್ಧವನ್ನು ಆಚರಿಸುತ್ತಿದೆ. ಪಾಕಿಸ್ತಾನ ಸೈನ್ಯವನ್ನು ಬಾಂಗ್ಲಾದೇಶದಿಂದ ಹೊರ ಹಾಕಲಾಗಿತ್ತು. ಆ ವೇಳೆ ಪಾಕ್​ನ 90,000 ಸೈನಿಕರು ಶರಣಾಗಿದ್ದರು. ನಿರ್ಣಾಯಕ ಯುದ್ಧದ 50ನೇ ವರ್ಷಾಚರಣೆಯನ್ನು ಆಚರಿಸಲು ಉಭಯ ದೇಶಗಳು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

For All Latest Updates

ABOUT THE AUTHOR

...view details