ನವದೆಹಲಿ:ವೈದ್ಯಕೀಯ ಆಮ್ಲಜನಕ ಮತ್ತು ಕೋವಿಡ್ ಪರಿಹಾರ ಕಾರ್ಯಾಚರಣೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ಭಾರತೀಯ ವಾಯುಪಡೆ ತನ್ನ 732 ಬಗೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಂಡಿದೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶದೊಳಗೆ ಮತ್ತು ವಿದೇಶಗಳಿಂದ 498 ಆಮ್ಲಜನಕ ಟ್ಯಾಂಕರ್‌ಗಳನ್ನು ಸ್ಥಳಾಂತರಿಸಿ, ಜನರ ನೆರವಿಗೆ ನಿಂತಿವೆ. ಈ ಮೆಗಾ ಕಾರ್ಯಾಚರಣೆಗಾಗಿ ವಾಯುಪಡೆಯು ತಲಾ ಆರು ಸಿ -17 ಮತ್ತು ಇಲ್ಯುಶಿನ್ -76 ಪ್ರಯಾಣಿಕ ವಿಮಾನಗಳು ಮತ್ತು 30 ಮಧ್ಯಮ - ಲಿಫ್ಟ್ ಸಿ -130 ಜೆ ಮತ್ತು ಎಎನ್ - 32 ವಿಮಾನಗಳನ್ನು ಒಳಗೊಂಡಂತೆ 42 ಸಾರಿಗೆ ವಿಮಾನಗಳನ್ನು ನಿಯೋಜಿಸಿದೆ.