ಹೈದರಾಬಾದ್: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ Mi-17V5 ತಮಿಳುನಾಡಿನ ಕನೂರಿನಲ್ಲಿ ಪತನಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಿಪಿನ್ ರಾವತ್ ಸೇರಿದಂತೆ ಅನೇಕರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಲಿಕಾಪ್ಟರ್ ಪತನಗೊಳ್ಳುತ್ತಿದ್ದಂತೆ ರಷ್ಯಾ ನಿರ್ಮಿತ Mi-17V5 ಕಾಪ್ಟರ್ ಬಗ್ಗೆ ಅನೇಕ ಸಂದೇಹಗಳು ಕೇಳಿ ಬರಲು ಶುರುವಾಗಿದ್ದು, ಇದರ ಮಧ್ಯೆ ಒಂದಿಷ್ಟು ಮಾಹಿತಿ ಇಲ್ಲಿದೆ.
Mi-17V5 ಮಧ್ಯಮ ಲಿಫ್ಟರ್ ಚಾಪರ್ ಆಗಿದ್ದು, ವಿಶ್ವದ ಅತ್ಯಂತ ಸುಧಾರಿತ ಹೆಲಿಕಾಪ್ಟರ್ಗಳಲ್ಲಿ ಒಂದಾಗಿದೆ. ರಷ್ಯಾದ ವಿಮಾನ ತಯಾರಿಕಾ ಕಜನ್ ಹೆಲಿಕಾಪ್ಟರ್ ಸಂಸ್ಥೆ ಇದರ ಉತ್ಪಾದನೆ ಮಾಡಿದ್ದು, ಸೈನ್ಯ, ಶಸ್ತ್ರಾಸ್ತ್ರ ರವಾನೆ, ಅಗ್ನಿಶಾಮಕ ಬೆಂಬಲ, ಬೆಂಗಾವಲು, ಗಸ್ತು ಕಾರ್ಯಾಚರಣೆಗಳಲ್ಲಿ ಇದರ ಬಳಕೆ ಮಾಡಿಕೊಳ್ಳಬಹುದಾಗಿದೆ.
ಭಾರತೀಯ ವಾಯುಪಡೆಯಲ್ಲಿ ಈ ಚಾಪರ್ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದ 2008ರಲ್ಲಿ ರಷ್ಯಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ 80 ಹೆಲಿಕಾಪ್ಟರ್ಗಳ ನಿರ್ಮಾಣಕ್ಕಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಪ್ರಕಾರ 2011ರಲ್ಲಿ ಭಾರತಕ್ಕೆ ಮೊದಲ ಚಾಪರ್ ಆಗಮಿಸಿತ್ತು. 2018ರ ವೇಳೆಗೆ ಎಲ್ಲ ಚಾಪರ್ಗಳು ಭಾರತದ ಸೇನಾ ಬತ್ತಳಿಕೆ ಸೇರಿಕೊಂಡಿವೆ.
ಇದನ್ನೂ ಓದಿರಿ:ಸೇನಾ ಕಾಪ್ಟರ್ ಪತನ : ಹಿರಿಯ ಅಧಿಕಾರಿಗಳೊಂದಿಗೆ ರಾಜನಾಥ್ ಸಿಂಗ್ ಚರ್ಚೆ,ನಾಳೆ ಸಂಸತ್ಗೆ ಮಾಹಿತಿ ಸಾಧ್ಯತೆ
ಈ ವಿಮಾನ 13,000kg ಟೇಕಾಫ್ ತೂಕವಿದ್ದು, 36 ಶಸ್ತ್ರಸಜ್ಜಿತ ಯೋಧರು ಅಥವಾ 4,500kg ಭಾರ ಹೊತ್ತು ಪ್ರತಿ ಗಂಟೆಗೆ 250 ರಿಂದ 580km ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಸಹಾಯಕ ಇಂಧನ ಟ್ಯಾಂಕ್ಗಳ ಅವಳವಡಿಕೆ ಮಾಡಿದಾಗ 1,065km. ವೇಗದವರೆಗೆ ವಿಸ್ತರಣೆ ಮಾಡಬಹುದಾಗಿದೆ. ವಿಶೇಷವೆಂದರೆ ಗರಿಷ್ಠ 6 ಸಾವಿರ ಕಿಲೋ ಮೀ. ವೇಗಕ್ಕೂ ಇದರ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.ಇನ್ನು ಹಮಾಮಾನ ವೈಪರಿತ್ಯ ಉಂಟಾದಾಗ, ಮರಭೂಮಿ ಪ್ರದೇಶ ಹಾಗೂ ಉಷ್ಣವಲಯಗಳಲ್ಲಿ ಇದರ ಬಳಕೆ ಮಾಡಲಾಗುತ್ತದೆ.