ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾದ ಚಟುವಟಿಕೆಗಳನ್ನು ಎದುರಿಸಲು ಭಾರತೀಯ ವಾಯು ಪಡೆಯು ಸೂಕ್ತ 'ನಾನ್ ಎಸ್ಕಲೇಟರಿ' ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಿಳಿಸಿದ್ದಾರೆ.
ಅಕ್ಟೋಬರ್ 8ರಂದು ವಾಯು ಪಡೆ ದಿನಾಚರಣೆ ಪೂರ್ವ ಸಿದ್ಧತೆ ಕುರಿತಾಗಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿನ ಇತ್ತೀಚಿನ ಬೆಳವಣಿಗೆಗಳು ಯಾವುದೇ ಸವಾಲನ್ನು ಎದುರಿಸಲು ಬಲಿಷ್ಠ ಸೇನಾ ಅಗತ್ಯ ತೋರಿಸುತ್ತವೆ. 'ಕೆಟ್ಟ ಪರಿಸ್ಥಿತಿ' ಸೇರಿದಂತೆ ಎಲ್ಲ ರೀತಿಯ ಭದ್ರತಾ ಸವಾಲುಗಳಿಗೆ ಐಎಎಫ್ ತಯಾರಿ ನಡೆಸುತ್ತಿದೆ ಮತ್ತು ಯಾವುದೇ ಪರಿಸ್ಥಿತಿ ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದರು.
ನಾವು ಕಾರ್ಯಾಚರಣೆಯಲ್ಲಿ ನಿಯೋಜಿತರಾಗಿದ್ದೇವೆ ಮತ್ತು ಯಾವಾಗಲೂ ಜಾಗರೂಕರಾಗಿರುತ್ತೇವೆ. ಎಲ್ಎಸಿ ಉದ್ದಕ್ಕೂ ಎಲ್ಲ ಚೀನೀ ಚಟುವಟಿಕೆಗಳನ್ನು ಭಾರತೀಯ ವಾಯು ಪಡೆಯು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ಮಾಹಿತಿ ನೀಡಿದರು. ಚೀನಾದ ಫೈಟರ್ ಜೆಟ್‌ಗಳು ವಾಸ್ತವಿಕ ನಿಯಂತ್ರಣ ರೇಖೆಯ ಹತ್ತಿರ ಹಾರುತ್ತಿರುವ ಇತ್ತೀಚಿನ ಘಟನೆಗಳ ಕುರಿತಾಗಿ ಪ್ರತಿಕ್ರಿಯಿಸಿ, 'ನಾನ್ ಎಸ್ಕಲೇಟರಿ' ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ನೆರೆಯ ದೇಶಕ್ಕೆ ಸಂದೇಶ ಕಳುಹಿಸಲಾಗಿದೆ ಎಂದರು.
ಇದೇ ವೇಳೆ ಚೀನಾದ ಯುದ್ಧೋಚಿತ ವರ್ತನೆವನ್ನು ಲೆಕ್ಕಿಸದೇ ನಮ್ಮ ಒಟ್ಟಾರೆ ತಯಾರಿಯು ನಿರಂತರ ಪ್ರಕ್ರಿಯೆಯಾಗಿದೆ. ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಲು ಮಾನದಂಡವೆಂದರೆ ಹಿಂದಿನ ಯಥಾಸ್ಥಿತಿಗೆ ಮರಳುವುದೇ ಆಗಿದೆ ಎಂದು ವಿಆರ್ ಚೌಧರಿ ಹೇಳಿದರು.
ಇದನ್ನೂ ಓದಿ:ಆರ್ಟಿಕಲ್ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರ ಸುರಕ್ಷಿತ.. ಅಮಿತ್ ಶಾ ಬಣ್ಣನೆ