ನವದೆಹಲಿ: ಐಎಎಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಶುಕ್ರವಾರ ಮಿಲಿಟರಿ ಸ್ಫೋಟಕಗಳು, ರಾಕೆಟ್‌ಗಳು, ಯುದ್ಧಸಾಮಗ್ರಿ ವ್ಯವಸ್ಥೆಗಳು, ಶಸ್ತ್ರಸಜ್ಜಿತ ಡ್ರೋನ್‌ಗಳು (ಹೆಕ್ಸಾಕಾಪ್ಟರ್‌ಗಳು), ಡ್ರೋನ್ ವಿರೋಧಿ ಕ್ಷಿಪಣಿಗಳು, ಬಾಂಬ್‌ಗಳು ಮತ್ತು ವಿವಿಧ ಯುದ್ಧೋಪಕರಣಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಪರಿಶೀಲಿಸಿದರು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿ.ಆರ್. ಚೌಧರಿ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ನಾಗ್ಪುರದ ಹೆಚ್‌ಕ್ಯು ಮೆಂಟೆನೆನ್ಸ್ ಕಮಾಂಡ್ ಪ್ರದೇಶಕ್ಕೆ ಆಗಮಿಸಿದ್ದರು. ವಿವಿಧ ಸಂಯೋಜಿತ ಸ್ಥಾವರಗಳು ಮತ್ತು ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಉತ್ಪಾದನಾ ಸೌಲಭ್ಯಗಳಾದ ಚಾಫ್ ಸೌಲಭ್ಯ, ಪಿನಾಕಾ ರಾಕೆಟ್‌ಗಳು ಹಾಗೂ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲದೆ, ಐಎಎಫ್‌ಗಾಗಿ 125 ಕೆ.ಜಿ ಬಾಂಬ್‌ಗಳು ಮತ್ತು ಚಾಫ್ ಮತ್ತು ಫ್ಲೇರ್‌ಗಳ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಯೋಜನೆಗಳಿಗೆ ಕುರಿತು ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಅಧ್ಯಕ್ಷರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡರು.