ಜೋಧ್‌ಪುರ (ರಾಜಸ್ಥಾನ): ಭಾರತೀಯ ವಾಯುಸೇನೆಯ ಸಿ -17 ಹೆವಿ ವಿಮಾನದ ಎರಡು ಖಾಲಿ ಆಮ್ಲಜನಕ ಟ್ಯಾಂಕರ್‌ಗಳನ್ನು ಗುಜರಾತ್‌ನ ಜಾಮ್ ನಗರಕ್ಕೆ ರಾಜಸ್ಥಾನದ ಜೋಧ್‌ಪುರ ವಾಯುನೆಲೆಗೆಯಿಂದ ಏರ್ಲಿಫ್ಟ್ ಮಾಡಲಾಗಿದೆ.
ಜೋಧಪುರ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ: ಗುಜರಾತ್‌ನಿಂದ ಆಕ್ಸಿಜನ್ ತಲುಪಿಸುತ್ತಿರುವ ವಾಯುಸೇನೆ
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದಂತೆ ಆಮ್ಲಜನಕದ ಕೊರತೆ ಹೆಚ್ಚಾಗಿದೆ. ಇದರಿಂದ ಭಾರತೀಯ ವಾಯುಪಡೆ (ಐಎಎಫ್) ಆಮ್ಲಜನಕವನ್ನು ಏರ್ಲಿಫ್ಟ್ ಮಾಡಿ ಸಾಗಿಸುತ್ತಿದೆ.
ಜೋಧಪುರ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ
ಜೋಧಪುರದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆ ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರವು ಗುಜರಾತ್‌ನ ಜಾಮ್‌ನಗರದಿಂದ 30 ರಿಂದ 40 ಕಿಲೋಲೀಟರ್ ಆಮ್ಲಜನಕವನ್ನು ಪೂರೈಸಿದೆ
ಆಮ್ಲಜನಕವನ್ನು ಹೊತ್ತ ಬೃಹತ್ ಮಿಲಿಟರಿ ವಿಮಾನ ಶನಿವಾರ ಬೆಳಗ್ಗೆ ಜೋಧ್‌ಪುರ ತಲುಪಿತ್ತು. ಮೂಲಗಳ ಪ್ರಕಾರ ಟ್ಯಾಂಕರ್‌ಗಳು ಜಾಮ್‌ನಗರದಿಂದ ಮತ್ತೆ ರಸ್ತೆ ಮೂಲಕ ಜೋಧ್‌ಪುರಕ್ಕೆ ಕಳುಹಿಸಲಾಗುತ್ತದೆ. ಆದಾಗ್ಯೂ ವಿಳಂಬವಾದರೆ, ಟ್ಯಾಂಕರ್‌ಗಳನ್ನು ವಿಮಾನದಲ್ಲಿ ಸಾಗಿಸಲಾಗುತ್ತದೆ.