ಕರ್ನಾಟಕ

karnataka

ETV Bharat / bharat

ಇಂದಿನಿಂದ ಬಜೆಟ್​ ಅಧಿವೇಶನ ಆರಂಭ: ಎಲ್ಲರಿಗೂ ಸ್ವಾಗತ ಕೋರಿದ ಪಿಎಂ ಮೋದಿ - ಎಲ್ಲರಿಗೂ ಸ್ವಾಗತಿಸಿದ ಪಿಎಂ ಮೋದಿ

ಇಂದಿನಿಂದ ಬಜೆಟ್​ ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮುನ್ನ ಪಿಎಂ ಮೋದಿ ಸಂಸದರು ಸೇರಿದಂತೆ ಎಲ್ಲರಿಗೂ ಸ್ವಾಗತಕೋರಿದರು.

BudgetSession commences today  I welcome you & all MPs to this session PM  political parties will have quality discussions Modi  ಇಂದಿನಿಂದ ಬಜೆಟ್​ ಅಧಿವೇಶನ ಆರಂಭ  ಎಲ್ಲರಿಗೂ ಸ್ವಾಗತಿಸಿದ ಪಿಎಂ ಮೋದಿ  ಮೇಡ್ ಇನ್ ಇಂಡಿಯಾ ಲಸಿಕೆಗಳ ಬಗ್ಗೆ ವಿಶ್ವದಲ್ಲಿ ವಿಶ್ವಾಸ
ಎಲ್ಲರಿಗೂ ಸ್ವಾಗತಿಸಿದ ಪಿಎಂ ಮೋದಿ

By

Published : Jan 31, 2022, 11:04 AM IST

ನವದೆಹಲಿ:ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಅದಕ್ಕೂ ಮುನ್ನ ನಾನು ನಿಮ್ಮನ್ನು ಮತ್ತು ಎಲ್ಲ ಸಂಸದರನ್ನು ಈ ಅಧಿವೇಶನಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಅಧಿವೇಶನವು ದೇಶದ ಆರ್ಥಿಕ ಪ್ರಗತಿ, ಲಸಿಕೆ ಕಾರ್ಯಕ್ರಮ, ಮೇಡ್ ಇನ್ ಇಂಡಿಯಾ ಲಸಿಕೆಗಳ ಬಗ್ಗೆ ವಿಶ್ವಾದ್ಯಂತ ವಿಶ್ವಾಸ ಮೂಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಅಧಿವೇಶನದಲ್ಲಿ, ಚರ್ಚೆಗಳು, ಚರ್ಚೆಗಳ ಸಮಸ್ಯೆಗಳು ಮತ್ತು ಮುಕ್ತ ಮನಸ್ಸಿನ ಚರ್ಚೆಗಳು ಜಾಗತಿಕ ಪ್ರಭಾವಕ್ಕೆ ಪ್ರಮುಖ ಅವಕಾಶವಾಗಬಹುದು. ಎಲ್ಲ ಸಂಸದರು, ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಗುಣಮಟ್ಟದ ಚರ್ಚೆಗಳನ್ನು ನಡೆಸುತ್ತವೆ ಮತ್ತು ದೇಶವನ್ನು ಶೀಘ್ರವಾಗಿ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ ಅಂತಾ ಪ್ರಧಾನಿ ಮೋದಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ನಡುವೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಹಕ್ಕುಚ್ಯುತಿ ಮಂಡನೆಗೆ ಸಾಕಷ್ಟು ಪುರಾವೆಗಳಿಲ್ಲ. ಮೇಲಾಗಿ ಪೆಗಾಸಸ್​ ವಿಷಯ ಸುಪ್ರೀಂಕೋರ್ಟ್​ ಮುಂದಿದೆ ಹಾಗಾಗಿ ಇದಕ್ಕೆ ಅವಕಾಶ ಕಲ್ಪಿಸಲು ಬರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್​​ ಈ ಬಗ್ಗೆ ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ:ಭ್ರಷ್ಟಾಚಾರ ಆರೋಪ: ಪತ್ರ ಬರೆದು ಸ್ಪಷ್ಟನೆ ನೀಡಿದ ರವಿ ಡಿ.ಚನ್ನಣ್ಣನವರ್

ABOUT THE AUTHOR

...view details