ನವದೆಹಲಿ :ಕ್ರಿಕೆಟರ್ ಕೆ.ಎಲ್. ರಾಹುಲ್ರ ಪ್ರೇಯಸಿ ಬಾಲಿವುಡ್ ನಟಿಆಥಿಯಾ ಶೆಟ್ಟಿ ತಾವೂ ಕೂಡ ಬಾಡಿ ಶೇಮಿಂಗ್ಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಬಾಡಿ ಶೇಮಿಂಗ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ ನಟಿ ಆಥಿಯಾ ಶೆಟ್ಟಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವಳಿದ್ದಾಗ ಸಣ್ಣಗಿದ್ದೆ. ಆಗಲೂ ಜನರು ನನ್ನ ದೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕೇವಲ ದಪ್ಪಗಿದ್ದವರು ಮಾತ್ರ ಬಾಡಿ ಶೇಮಿಂಗ್ಗೆ ಒಳಗಾಗಲ್ಲ. ಸಣ್ಣಗಿದ್ದರೂ ಜನ ನಮ್ಮ ಬಗ್ಗೆ ಕೀಳಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ದಪ್ಪ ಮತ್ತು ಸಣ್ಣಗೆ ಇರುವವರನ್ನು ಆಡಿಕೊಂಡರೂ ಸಹ ಅದು ಬಾಡಿ ಶೇಮಿಂಗ್ಗೆ ಸೇರುತ್ತದೆ. ನಾನೂ ಕೂಡ ಇದನ್ನು ಅನುಭವಿಸಿದ್ದೇನೆ. ನಾನು ತಿಳಿದುಕೊಂಡಂತೆ ನಮ್ಮ ತೂಕ, ನಾವು ಹೇಗಿದ್ದೇವೆ ಎಂಬುದರ ಬಗ್ಗೆ ಜನ ಆಡಿಕೊಳ್ಳಲು ಆರಂಭಿಸಿದರೆ ಇದರಿಂದ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ.
ಜೀವನದಲ್ಲಿ ಅವರು ಏನೆಲ್ಲಾ ಕಷ್ಟಪಡುತ್ತಿರುತ್ತಾರೋ, ಅವರ ಅಭದ್ರತೆಗಳೇನು ಎಂಬುದು ನಿಮಗೆ ತಿಳಿದಿರುವುದಿಲ್ಲ. ನೀವು ಯಾರ ಬಗ್ಗೆಯಾದರೂ ಒಳ್ಳೆಯ ಮಾತನಾಡಲು ಸಾಧ್ಯವಿಲ್ಲವಾದರೆ, ಅವರ ಬಗ್ಗೆ ಕೆಟ್ಟ ಕಮೆಂಟ್ಸ್ ಮಾಡುವುದನ್ನು ಮಾಡಲೇಬೇಡಿ.