ಕರ್ನಾಟಕ

karnataka

ETV Bharat / bharat

ಬೆಳಿಗ್ಗೆ 6.20ಕ್ಕೆ ಕಚೇರಿಯಲ್ಲಿರುತ್ತಿದ್ದೆ, ರಾತ್ರಿ 8.30ಕ್ಕೆ ಮನೆಗೆ ಹೊರಡುತ್ತಿದ್ದೆ: ಎನ್‌.ಆರ್‌.ನಾರಾಯಣ ಮೂರ್ತಿ - ಯುವಕರು ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕು

Infosys founder N.R.Narayana Murthy: ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಮಾತ್ರ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಾಧ್ಯ ಎಂಬ ಹೇಳಿಕೆಯನ್ನು ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್.ನಾರಾಯಣ ಮೂರ್ತಿ ಪುನರುಚ್ಚರಿಸಿದ್ದಾರೆ.

Narayana Murthy
ನಾರಾಯಣ ಮೂರ್ತಿ

By ETV Bharat Karnataka Team

Published : Dec 10, 2023, 12:37 PM IST

ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದಲ್ಲಿ 'ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು' ಎಂದು ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ಮೂರ್ತಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ಫೋಸಿಸ್‌ನಲ್ಲಿ ನಾನು ಸಕ್ರಿಯವಾಗಿದ್ದಾಗ ಬೆಳಿಗ್ಗೆ 6:20ಕ್ಕೆ ಕಚೇರಿಯಲ್ಲಿರುತ್ತಿದ್ದೆ. ರಾತ್ರಿ 8:30ಕ್ಕೆ ಕಚೇರಿಯಿಂದ ಹೊರಡುತ್ತಿದ್ದೆ ಎಂದು 77 ವರ್ಷ ವಯಸ್ಸಿನ ಉದ್ಯಮಿ ಹೇಳಿದರು. ಈ ವೇಳಾಪಟ್ಟಿಯ ಪ್ರಕಾರ, ಮೂರ್ತಿ ಅವರು ದಿನದ 14 ಗಂಟೆಗಳನ್ನು ಕಚೇರಿಯಲ್ಲೇ ಕಳೆಯುತ್ತಿದ್ದರು.

ನನ್ನ 40 ವರ್ಷಗಳ ವೃತ್ತಿಪರ ಜೀವನದಲ್ಲಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ನಮಗೆ ವಾರದಲ್ಲಿ ಆರು ದಿನ ಕೆಲಸ ಇರುತ್ತಿತ್ತು. 1994ರವರೆಗೆ ನಾನು ವಾರಕ್ಕೆ ಕನಿಷ್ಠ 85ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಆ ಪರಿಶ್ರಮ ವ್ಯರ್ಥವಾಗಲಿಲ್ಲ. ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವೂ ಕಠಿಣ ಪರಿಶ್ರಮದ ಮೂಲಕವೇ ಈ ಸಾಧನೆ ಮಾಡಿದೆ ಎಂದು ನನಗೆ ಗೊತ್ತು. ಬಡತನದಿಂದ ಪಾರಾಗುವ ಏಕೈಕ ಮಾರ್ಗವೆಂದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ಎಂದು ನನ್ನ ಪೋಷಕರು ನನಗೆ ಕಲಿಸಿಕೊಟ್ಟಿದ್ದರು ಎಂದು ತಿಳಿಸಿದರು.

ಕಳೆದ ಅಕ್ಟೋಬರ್‌ನಲ್ಲಿ 3one4 ಕ್ಯಾಪಿಟಲ್‌ನ 'ದಿ ರೆಕಾರ್ಡ್' ಶೀರ್ಷಿಕೆಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಎನ್.ಆರ್.ನಾರಾಯಣ ಮೂರ್ತಿ, ದೇಶದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ಪ್ರತಿ ವಾರ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಬಳಿಕ, ರಾಷ್ಟ್ರ ನಿರ್ಮಾಣ, ತಂತ್ರಜ್ಞಾನ, ಇನ್ಫೋಸಿಸ್ ಕಂಪನಿ ಸೇರಿದಂತೆ ಹಲವಾರು ಇತರೆ ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು.

ಇದನ್ನೂ ಓದಿ:ಯಾವುದನ್ನೂ ಉಚಿತವಾಗಿ ನೀಡಬಾರದು : ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ

ಮೂರ್ತಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಬೆಂಬಲಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಹೆಚ್ಚಿನವರು ಇಂತಹ ಬೇಡಿಕೆಯ ಕೆಲಸದ ವೇಳಾಪಟ್ಟಿಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದರು.

ಇದನ್ನೂ ಓದಿ:ಶಿಕ್ಷಕರ ತರಬೇತಿಗೆ ಭಾರತ ವಾರ್ಷಿಕ 1 ಶತಕೋಟಿ ಡಾಲರ್ ಖರ್ಚು ಮಾಡಬೇಕು: ನಾರಾಯಣ ಮೂರ್ತಿ

ABOUT THE AUTHOR

...view details