ಕರ್ನಾಟಕ

karnataka

ETV Bharat / bharat

ಅಕ್ರಮ ಆದಾಯ ಸಂಗ್ರಹ ಆರೋಪ: ಹೋಟೆಲ್​ 'ರಾಯಲ್ ಪ್ಲಾಜಾ' ಅಧ್ಯಕ್ಷರ ನಿವಾಸದ ಮೇಲೆ ಐಟಿ ದಾಳಿ

ವಿದೇಶದಲ್ಲಿ ಅಕ್ರಮವಾಗಿ ಆದಾಯ ಸಂಗ್ರಹ ಮಾಡಿರುವ ಆರೋಪದ ಮೇಲೆ ಹೋಟೆಲ್ ರಾಯಲ್ ಪ್ಲಾಜಾ ಅಧ್ಯಕ್ಷರ ನಿವಾಸದ ಮೇಲೆ ಐಟಿ ದಾಳಿ ನಡೆಸಲಾಗಿದೆ.

Hotel Royal Plaza
Hotel Royal Plaza

By

Published : Jul 23, 2022, 9:16 PM IST

ನವದೆಹಲಿ: ವಿದೇಶಗಳಲ್ಲಿ ಅಕ್ರಮವಾಗಿ 40 ಕೋಟಿ ರೂಪಾಯಿ ಆದಾಯ ಸಂಗ್ರಹ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಹೋಟೆಲ್ ರಾಯಲ್​ ಪ್ಲಾಜಾದ ಅಧ್ಯಕ್ಷ ಅಶೋಕ್ ಮಿತ್ತಲ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ವೇಳೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿದೇಶದಲ್ಲಿ ಮಿತ್ತಲ್ ಹೊಂದಿರುವ ಅಘೋಷಿತ ಆಸ್ತಿ ಮತ್ತು ವಿದೇಶಿ ತೀರಗಳಲ್ಲಿ ಹೊಂದಿರುವ ಕಪ್ಪು ಹಣದ ಬಗ್ಗೆ ಶೋಧಕಾರ್ಯ ನಡೆಸಿದೆ.

ಹೋಟೆಲ್ ರಾಯಲ್ ಪ್ಲಾಜಾ, ಲೈಟ್ಸ್ ಟ್ರೇಡಿಂಗ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ಸ್ಥಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಾರ, ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಹಾರ್ಡ್ ಕಾಪಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾದ ರೂಪದಲ್ಲಿ ದೊಡ್ಡ ಪ್ರಮಾಣದ ಮಾಹಿತಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ:ಸಾಕು ನಾಯಿಗಳಿಗಾಗಿಯೇ ದಿನದ 24 ಗಂಟೆಗಳ ಎಸಿ ಮನೆ ನಿರ್ಮಿಸಿದ್ದ ಪಾರ್ಥ ಚಟರ್ಜಿ!

ರಾಯಲ್ ಪ್ಲಾಜಾ ಕಂಪನಿ ನಿವ್ವಳ ಲಾಭ್ಯದಲ್ಲಿ ಆದಾಯ ತೆರಿಗೆ ರಿಟರ್ನ್ಸ್​​ ವೇಳೆ ಮೋಸ ಮಾಡಿದ್ದು, ವಿದೇಶದಲ್ಲಿ ಹೊಂದಿರುವ ಆಸ್ತಿ ಬಗ್ಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಜೊತೆಗೆ ಅಕ್ರಮವಾಗಿ 40 ಕೋಟಿ ರೂಪಾಯಿ ಬಗ್ಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ ಎಂದು ಹೇಳಲಾಗಿದೆ.

ABOUT THE AUTHOR

...view details