ನವದೆಹಲಿ :ದೇಶದ ಜನರಿಗೆ ಕೋವಿಡ್ ಲಸಿಕೆ ಹಾಕುವಲ್ಲಿ ಭಾರತ ಅದ್ಭುತ ಯಶಸ್ಸು ಸಾಧಿಸಿದೆ. ತಂತ್ರಜ್ಞಾನ ವ್ಯಾಕ್ಸಿನೇಷನ್ ಪ್ರಕ್ರಿಯೆಯ ಬೆನ್ನೆಲುಬು ಎಂದಿರುವ ನಮೋ, ನಾನು ಟೀಕೆಗಳನ್ನ ಗೌರವಿಸುತ್ತೇನೆ. ಆದರೆ, ಈಗಿನ ಟೀಕೆ, ವಿಮರ್ಶೆಗಳು ತುಂಬಾ ಕೀಳಮಟ್ಟದಲ್ಲಿರುತ್ತವೆ ಎಂದು ಹೇಳಿದ್ದಾರೆ.
ನಿಯತಕಾಲಿಕೆವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನರೇಂದ್ರ ಮೋದಿ, ಬಲಿಷ್ಠ ರಾಷ್ಟ್ರ ಕಟ್ಟಲು ಸರ್ಕಾರ ನಡೆಸಬೇಕೇ ಹೊರತು ಮುಂದಿನ ಸರ್ಕಾರ ರಚನೆ ಮಾಡಲು ಅಲ್ಲ ಎಂದು ಪ್ರತಿಪಾದಿಸುವಾಗ ಟೀಕೆಗಳಿಗೆ ನಾನು ಹೆಚ್ಚಿನ ಗೌರವ ನೀಡುತ್ತೇನೆ ಎಂದಿದ್ದಾರೆ. ಆದರೆ, ಇಂದಿನ ಟೀಕೆಗಳು ಕೇವಲ ಕೀಳಮಟ್ಟದಿಂದ ಕೂಡಿರುತ್ತವೆ. ಅದರಲ್ಲಿ ರಾಜಕೀಯ ಮಾತ್ರ ಇರುತ್ತದೆ ಎಂದಿದ್ದಾರೆ.
ಪ್ರಾಮಾಣಿಕವಾಗಿ ನಾನು ಟೀಕೆಗಳಿಗೆ ಹೆಚ್ಚಿನ ಗೌರವ ನೀಡುತ್ತೇನೆ ಎಂದಿರುವ ಮೋದಿ, ಇತ್ತೀಚಿನ ದಿನಗಳಲ್ಲಿ ವಿಮರ್ಶೆ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದು ದುರದೃಷ್ಟವಶಾತ್. ಜನರು ಹೆಚ್ಚಾಗಿ ಆರೋಪ ಮಾಡುತ್ತಾರೆ.