ನವದೆಹಲಿ:1971ರ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಸದಸ್ಯರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ವಿಜಯ ದಿವಸ್ ಪ್ರಯುಕ್ತ ದ್ವಿಪಕ್ಷೀಯ ವರ್ಚುಯಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಿದ್ದು, ಭಾರತೀಯ ಸೈನಿಕರಿಗೆ ಬಾಂಗ್ಲಾ ಪಿಎಂ ಗೌರವ ಸಲ್ಲಿಸಿದ್ದಾರೆ.
ಉಭಯ ದೇಶಗಳ ಸೈನಿಕರು, ಅಮಾಯಕ ಜನರೂ ಸೇರಿದಂತೆ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 30 ಲಕ್ಷಕ್ಕೂ ಹೆಚ್ಚು ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ವಿಮೋಚನೆಗಾಗಿ ಹೃದಯಪೂರ್ವಕ ಬೆಂಬ ನೀಡಿದ ಭಾರತ ಸರ್ಕಾರ ಮತ್ತು ಜನರಿಗೆ ನಾನು ನನ್ನ ಕೃತಜ್ಞತೆ ತಿಳಿಸುತ್ತೇನೆ. ಭಾರತ ನಮ್ಮ ನಿಜವಾದ ಗೆಳೆಯ ಎಂದು ಶೇಖ್ ಹಸೀನಾ ಹೇಳಿದರು.