ನವದೆಹಲಿ: ಸರ್ಕಾರ ಜನರಿಗೆ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತ ಕಾಪಾಡಿಕೊಳ್ಳುವಂತೆ ಹೇಳುತ್ತೆ. ಆದರೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಯ ಸಮಯದಲ್ಲಿ ಅವರು ಮಾಡಿದ್ದೇನು?, ನೀವು ರೂಪಿಸಿದ್ದ ನಿಯಮಗಳನ್ನು ನೀವೇ ಉಲ್ಲಂಘಿಸುತ್ತಿದ್ದೀರಿ ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಟೀಕಾಸಮರ ನಡೆಸಿದರು.
ದೇಶದಲ್ಲಿ ಕೋವಿಡ್(Covid-19) ಮಾನದಂಡಗಳನ್ನು ಉಲ್ಲಂಘಿಸಿದ ಕ್ರೆಡಿಟ್ ನಿಮಗೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರಾಜ್ಯಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಕೋವಿಡ್ ವಿಚಾರವಾಗಿ ಮಾತನಾಡಿದ ಅವರು ಕೋವಿಡ್ ವಾರಿಯರ್ಸ್ ಸೇವೆಯನ್ನು ಶ್ಲಾಘಿಸಿದರು. ವೈದ್ಯರು ಮತ್ತು ಅರೆವೈದ್ಯರೂ ಸೇರಿದಂತೆ ಕೋವಿಡ್ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ಕೊರೊನಾ 2ನೇ ಅಲೆಯ ವೇಳೆ ದೆಹಲಿಯಲ್ಲಿ 'ಆಕ್ಸಿಜನ್ ಲ್ಯಾಂಗರ್' ಮೂಲಕ ಇತರರಿಗೆ ಸಹಾಯ ಮಾಡಿದವರಿಗೂ ವಂದಿಸುತ್ತೇನೆ. ಮನೆಯಿಂದ ಹೊರಬಂದು ಪ್ಲಾಸ್ಮಾ ದಾನ ಮಾಡಿದವರಿಗೆ ಸಲ್ಯೂಟ್ ಹೊಡೆಯುತ್ತೇನೆ ಎಂದು ಅವರು ಗುಣಗಾನ ಮಾಡಿದರು.
ಇದನ್ನೂ ಓದಿ: Pegasus ತಂತ್ರಾಂಶ ವಿವಾದಕ್ಕೆ ಕಲಾಪಗಳು ಬಲಿ: ಮಧ್ಯಾಹ್ನಕ್ಕೆ ಮುಂದೂಡಿಕೆ!