ಕರ್ನಾಟಕ

karnataka

ETV Bharat / bharat

ನನ್ನ ತಪ್ಪೇನು? ಯೋಗಿ ವಿರುದ್ಧ ಠಾಕ್ರೆ ಹೇಳಿಕೆ ನೆನಪಿಸಿದ ರಾಣೆ!... ಅಂದು ಉದ್ಧವ್​ ಬಳಸಿದ ಪದ ಯಾವುದು?

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಿತ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಈಗಾಗಲೇ ರಿಲೀಸ್ ಆಗಿದ್ದು, ಇಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು.

Narayan Rane
Narayan Rane

By

Published : Aug 25, 2021, 6:47 PM IST

ಮುಂಬೈ(ಮಹಾರಾಷ್ಟ್ರ):ಎಷ್ಟನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿಲ್ಲದ ಉದ್ಧವ್​ ಠಾಕ್ರೆಗೆ ನಾನು ಕಪಾಳಮೋಕ್ಷ ಮಾಡುತ್ತಿದ್ದೆ ಎಂಬ ವಿವಾದಿತ ಹೇಳಿಕೆ ನೀಡಿ, ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ನಾರಾಯಣ್​ ರಾಣೆ ಈಗಾಗಲೇ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದಾರೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

ನನ್ನ ಒಳ್ಳೆಯತನವನ್ನ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ನಾನು ಈಗಲೇ ಏನು ಮಾತನಾಡುವುದಿಲ್ಲ. ಜನಾಶೀರ್ವಾದ​ ಯಾತ್ರೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಡೆಸಲಾಗುತ್ತಿದೆ.

ಪ್ರಧಾನಿ ಮೋದಿ ಅವರ ಮಾರ್ಗದರ್ಶನದಂತೆ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮುಂದಿನ ಎರಡು ದಿನಗಳಲ್ಲಿ ಈ ಯಾತ್ರೆ ಪುನಾರಂಭ ಮಾಡುವುದಾಗಿ ಕೇಂದ್ರ ಸಚಿವ ರಾಣೆ ಮಾಹಿತಿ ನೀಡಿದರು.

ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ರಾಣೆ, ಅವರ ಬಗ್ಗೆ ನಾನು ಏನು ತಪ್ಪು ಮಾತನಾಡಿಲ್ಲ. ದೇಶದ ಬಗ್ಗೆ ಅವರಿಗೆ ಜ್ಞಾನ ಇಲ್ಲದಿರುವುದನ್ನ ಪ್ರಶ್ನಿಸುವುದು ತಪ್ಪೇ? ಎಂದು ಹೇಳಿದ್ದಾರೆ. ಇದೇ ವೇಳೆ, ಈ ಹಿಂದೆ 2018ರಲ್ಲಿ ಉದ್ಧವ್​ ಠಾಕ್ರೆ ನೀಡಿದ್ದ ಹೇಳಿಕೆವೊಂದನ್ನ ಉಲ್ಲೇಖಿಸಿದ್ದಾರೆ.

ಇದೇ ವೇಳೆ, ಮಹಾರಾಷ್ಟ್ರವನ್ನ ನಾವು ಪಶ್ಚಿಮ ಬಂಗಾಳ ಆಗಲು ಬಿಡುವುದಿಲ್ಲ ಎಂದಿರುವ ರಾಣೆ, ಇಲ್ಲಿ ಆಡಳಿತ ನಡೆಸುತ್ತಿರುವ ಶಿವಸೇನೆ ಒಂದು ರೀತಿಯ ಅತಿಥಿ ಇದ್ದ ಹಾಗೇ ಎಂದಿದ್ದಾರೆ.

ಇದನ್ನೂ ಓದಿರಿ: ಎರಡು ಟೆಂಪೋಗಳಿಗೆ ಡಿಕ್ಕಿ ಹೊಡೆದ ಟ್ರಕ್​.. ಸ್ಥಳದಲ್ಲೇ ಆರು ಮಂದಿ ಸಾವು

ಉದ್ಧವ್​ ಠಾಕ್ರೆ ಏನು ಹೇಳಿದ್ದರು?

2018ರಲ್ಲಿ ಯೋಗಿ ಆದಿತ್ಯನಾಥ್​​ ಅವರ ಬಗ್ಗೆ ಮಾತನಾಡಿದ್ದ ಉದ್ಧವ್ ಠಾಕ್ರೆ ಅವರನ್ನ ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳಿದ್ದರು. ಈ ವಿಚಾರವನ್ನ ಇದೀಗ ರಾಣೆ ಪ್ರಸ್ತಾಪಿಸಿದ್ದಾರೆ. 2018ರಲ್ಲಿ ಶಿವಾಜಿ ಪಟ್ಟಾಭಿಷೇಕಕ್ಕೆ ಉತ್ತರ ಪ್ರದೇಶದ ಗಾಗಭಾಟ್‌ನಿಂದ ಪುರೋಹಿತರು ಬಂದಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಠಾಕ್ರೆ, ಯೋಗಿ ಆದಿತ್ಯನಾಥ್​ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರು.

ABOUT THE AUTHOR

...view details