ಕರ್ನಾಟಕ

karnataka

ETV Bharat / bharat

ಚರಂಡಿ ನೀರು, ತ್ಯಾಜ್ಯ ಬಳಸಿ ಬಸ್‌, ಕಾರು, ಟ್ರಕ್‌ಗಳ ಓಡಾಟ: 'ಗ್ರೀನ್‌ ಹೈಡ್ರೋಜನ್‌'ನತ್ತ ಗಡ್ಕರಿ ಚಿತ್ತ - ಹಸಿರು ಹೈಡ್ರೋಜನ್‌ ಬಸ್‌ಗಳು

ಹೈಡ್ರೋಜನ್ ಇಂಧನ ಚಾಲಿತ ವಾಹನ​ಗಳನ್ನು ರಸ್ತೆಗಿಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಈ ಮಧ್ಯೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಹಸಿರು ಹೈಡ್ರೋಜನ್‌ ಇಂಧನದಿಂದ ಚಲಿಸುವ ಕಾರು ಖರೀದಿಸಿದ್ದಾರೆ. ಜೊತೆಗೆ, ದೇಶದಲ್ಲಿ ಗ್ರೀನ್‌ ಹೈಡ್ರೋಜನ್‌ ಬಳಸಿ ವಾಹನ ಚಲಾಯಿಸುವ ಬಗೆಗಿನ ಅವರ ವಿನೂತನ ಯೋಜನೆಯನ್ನು ತಿಳಿಸಿದರು.

ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

By

Published : Dec 3, 2021, 7:02 AM IST

ನವದೆಹಲಿ: ಪೆಟ್ರೋಲ್, ಡೀಸೆಲ್ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಹೈಡ್ರೋಜನ್ ಇಂಧನ ಚಾಲಿತ ವಾಹನ​ಗಳನ್ನು ರಸ್ತೆಗಿಳಿಸುವ ಯೋಜನೆಯೂ ಪ್ರಗತಿಯಲ್ಲಿದೆ.

ಹೈಡ್ರೋಜನ್ ಇಂಧನ ಚಾಲಿತ ವಾಹನಗಳ​ ಬಗ್ಗೆ ಸಂಶೋಧನೆಗಳು ನಿರಂತರವಾಗಿ ಸಾಗುತ್ತಿವೆ. ಈ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು. ತೈಲ ಬೆಲೆ ಏರಿಕೆಯಿಂದಲೂ ಕಂಗೆಟ್ಟಿರುವ ಜನರಿಗೆ ಈ ವಾಹನಗಳು ಉಪಯುಕ್ತ. ಈ ಬೆನ್ನಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

'ನಗರಗಳಲ್ಲಿ ಚರಂಡಿ ನೀರು ಮತ್ತು ಘನ ತ್ಯಾಜ್ಯ ಬಳಸಿ ಉತ್ಪಾದಿಸುವ ಹಸಿರು ಹೈಡ್ರೋಜನ್‌ ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳನ್ನು ದೇಶದಲ್ಲಿ ರಸ್ತೆಗಿಳಿಸುವ ಯೋಜನೆಯನ್ನು ನಾನು ಕೈಗೊಂಡಿದ್ದೇನೆ. ಅಷ್ಟೇ ಅಲ್ಲದೇ, ಫರಿದಾಬಾದ್‌ನ ತೈಲ ಸಂಶೋಧನಾ ಸಂಸ್ಥೆ ಉತ್ಪಾದಿಸಿ ಹಸಿರು ಹೈಡ್ರೋಜನ್‌ ಇಂಧನದಿಂದ ಚಲಿಸುವ ಕಾರನ್ನು ಖರೀದಿಸಿದ್ದೇನೆ' ಎಂದು ಅವರು ತಿಳಿಸಿದರು.

ABOUT THE AUTHOR

...view details