ನವದೆಹಲಿ: 14 ನೇ ಜೈಪುರ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತೆ, ಲೇಖಕ ಮತ್ತು ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸಫ್‌ಜೈ ಅವರು ಶಿಕ್ಷಣ, ಮಾನವ ಹಕ್ಕುಗಳು ಮತ್ತು ಭಾರತ - ಪಾಕಿಸ್ತಾನ ಸಂಬಂಧದ ಬಗ್ಗೆ ತಮ್ಮ ಆಶಯಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಮಲಾಲಾ ತಮ್ಮ ಹೊಸ ಪುಸ್ತಕ " ವಿ ಆರ್ ಡಿಸ್ಪ್ಲೇಸಡ್: ಮೈ ಜರ್ನಿ ಅಂಡ್ ಸ್ಟೋರೀಸ್ ಫ್ರಮ್ ರೆಫ್ಯೂಜಿ ಗರ್ಲ್ಸ್ ಅರೌಂಡ್ ದಿ ವರ್ಲ್ಡ್" ಬಗ್ಗೆ ಮಾತನಾಡಿದರು. ಇಂಡೋ-ಪಾಕ್ ಸಂಬಂಧದ ಬಗ್ಗೆ ಮಾತನಾಡಿದ 23 ವರ್ಷದ ಮಲಾಲಾ, ನೀವು ಭಾರತೀಯರು ಮತ್ತು ನಾನು ಪಾಕಿಸ್ತಾನಿ. ನಾವು ಸಂಪೂರ್ಣವಾಗಿ ಚೆನ್ನಾಗಿದ್ದೇವೆ. ಈ ದ್ವೇಷ ನಮ್ಮ ನಡುವೆ ಏಕೆ ಸೃಷ್ಟಿಯಾಗಿದೆ? ಗಡಿಗಳ ವಿಭಜನೆ ಮತ್ತು ತತ್ವಶಾಸ್ತ್ರ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಮಾನವರಾಗಿ ನಾವೆಲ್ಲರೂ ಶಾಂತಿಯಿಂದ ಬದುಕಲು ಬಯಸುತ್ತೇವೆ ಎಂದು ಹೇಳಿದರು.