ಕರ್ನಾಟಕ

karnataka

ETV Bharat / bharat

ದೇವೇಗೌಡರ ಆರೋಗ್ಯ ವಿಚಾರಿಸಿದ ಉಪರಾಷ್ಟ್ರಪತಿ.. ಧನ್ಯವಾದ ಹೇಳಿದ ಮಾಜಿ ಪಿಎಂ - House with a bitter experience

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಖರ್ಜಿ ಅವರು ಜೆಡಿಎಸ್​ ಸಂಸದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದ್ದಾರೆ. ಇದಕ್ಕೆ ಹೆಚ್​ಡಿಡಿ ಧನ್ಯವಾದ ತಿಳಿಸಿದ್ದಾರೆ.

ಜೆಡಿಎಸ್​ ಸಂಸದ ದೇವೇಗೌಡರ ನಿವಾಸಕ್ಕೆ ಭೇಟಿ
ಜೆಡಿಎಸ್​ ಸಂಸದ ದೇವೇಗೌಡರ ನಿವಾಸಕ್ಕೆ ಭೇಟಿ

By

Published : Dec 7, 2022, 12:47 PM IST

ನವದೆಹಲಿ:ಸಂಸದರ ನಿವಾಸದಲ್ಲಿರುವ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರನ್ನು ಉಪರಾಷ್ಟ್ರಪತಿ ಜಗದೀಪ್​ ಧನಖರ್ಜಿ ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಹೆಚ್​ ಡಿ ದೇವೇಗೌಡ, ನನ್ನ ಆರೋಗ್ಯ ವಿಚಾರಿಸಲು ತಮ್ಮ ನಿವಾಸಕ್ಕೆ ಆಗಮಿಸಿದ ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಖರ್ಜಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು ನನ್ನ ಸ್ನೇಹಿತರಾಗಿದ್ದರು ಮತ್ತು ನನ್ನಂತೆಯೇ ರೈತ ಕುಟುಂಬದಿಂದ ಬಂದಿದ್ದಾರೆ. ನನ್ನ ಶುಭ ಹಾರೈಕೆಗಳು ಸದಾ ಅವರಿಗೆ ಇರುತ್ತದೆ ಎಂದಿದ್ದಾರೆ.

ದೇವೇಗೌಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಈ ಸದನದಲ್ಲಿ ಕಹಿ ಅನುಭವ ಹೊಂದಿರುವ ಸದಸ್ಯ ನಾನೊಬ್ಬನೇ. ಮಾತನಾಡಲು ಅವಕಾಶ ಸಿಗುವುದು ತುಂಬಾ ಕಷ್ಟವಾಗಿದೆ. ಒಬ್ಬ ಸದಸ್ಯ 2 ರಿಂದ 3 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂಬ ಉಭಯ ಸದನಗಳ ನಿರ್ಧಾರ, ಅದು ನನಗೆ ಕಹಿ ಅನುಭವವಾಗಿದೆ ಎಂದು ಜೆಡಿಎಸ್ ಸಂಸದ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ಇದನ್ನೂ ಓದಿ:ಜಿ20 ಸಂಬಂಧ ಸರ್ವಪಕ್ಷಗಳ ಸಭೆ: ಪ್ರಧಾನಿ ಮೋದಿಗೆ ದೇವೇಗೌಡರು ನೀಡಿದ ಸಲಹೆಗಳಿವು..

ABOUT THE AUTHOR

...view details