ಅದಿಲಾಬಾದ್ (ತೆಲಂಗಾಣ): ನಾನು ಎಂದಿಗೂ ರೈತ ಪ್ರತಿಭಟನೆಯ ವಿರೋಧಿಯಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ನಾನು ರೈತ ಪ್ರತಿಭಟನೆಯ ವಿರೋಧಿಯಲ್ಲ ಎಂದ ಮೋಹನ್ ಭಾಗವತ್ ನಿನ್ನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಏಕಲವ್ಯ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು, ಸಾವಯವ ಕೃಷಿಕರೊಂದಿಗೆ ಸಂವಾದ ನಡೆಸಿದರು.
ಇದನ್ನೂ ಓದಿ: ಆಪ್ಗೆ ಐದು ವರ್ಷ ನೀಡಿ.. ಬಿಜೆಪಿಯ 25 ವರ್ಷ ಮರೆಯುವಿರಿ: ಗುಜರಾತ್ನಲ್ಲಿ ಕೇಜ್ರಿವಾಲ್ ಮಾತು
ರೈತರು ಸಂಘಟಿತರಾಗಿ ಸಾವಯವ ಕೃಷಿ ಮಾಡಬೇಕು. ಅದಿಲಾಬಾದ್ನ ಸಾವಿರಾರು ರೈತರು ಈ ಕೃಷಿ ಮಾರ್ಗವನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ರೈತರು ನಮ್ಮ ಅನ್ನದಾತರಾಗಿರುವಾಗ ನಾನು ಅವರ ಪ್ರತಿಭಟನೆ, ಆಂದೋಲನಗಳ ವಿರೋಧಿಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಹೇಳಿದರು.