ನವದೆಹಲಿ:ಇಂಧನ ಬೆಲೆಗಳು ಗಗನಕ್ಕೇರಿದ್ದು, ಇದರ ವಿರುದ್ಧ ಎಲ್ಲೆಡೆ ಅಸಮಾಧಾನದ ಕೂಗು ಕೇಳಿಬರುತ್ತಿದೆ. ಇದ ಬೆನ್ನಲ್ಲೇ ಜಗತ್ತಿನಲ್ಲಿ ನವೀಕರಣಗೊಳ್ಳದ ಇಂಧನಕ್ಕೆ ಪರ್ಯಾಯವಾಗಿ ಹೈಡ್ರೋಜನ್ ಕಾರುಗಳನ್ನು ರೂಪಿಸಲಾಗುತ್ತಿದೆ. ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಸ್ವತಃ ಹೈಡ್ರೋಜನ್ ಕಾರಿನಲ್ಲಿ ಸಂಸತ್ತಿಗೆ ಆಗಮಿಸುವ ಮೂಲಕ ಹೈಡ್ರೋಜನ್ ಕಾರುಗಳ ಬಳಕೆಗೆ ನಾಂದಿ ಹಾಡಿದ್ದಾರೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಕಾರನ್ನು ಟೊಯೋಟಾ ಕಂಪನಿ ಪರಿಚಯಿಸಿದೆ. ಟೊಯೋಟಾ ಮಿರಾಯ್ ಎಂದು ಹೆಸರಿಡಲಾದ ಈ ಪ್ರಾಯೋಗಿಕ ಕಾರಿನಲ್ಲಿ ಗಡ್ಕರಿ ಅವರು ತಮ್ಮ ನಿವಾಸದಿಂದ ಪ್ರಯಾಣ ಬೆಳೆಸಿ ಸಂಸತ್ತಿಗೆ ಬಂದಿದ್ದಾರೆ.
ಈ ಹಿಂದೆ ಗಡ್ಕರಿ ಅವರು ಹೈಡ್ರೋಜನ್ ಆಧರಿತವಾದ ಸುಧಾರಿತ 'ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್' (ಎಫ್‌ಸಿಇವಿ) ಟೊಯೋಟಾ ಮಿರಾಯ್ ಅನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಿದ್ದರು. ಹಸಿರು ಹೈಡ್ರೋಜನ್ ಇಂಧನವು ಕಾರಿಗೆ ಹೇಗೆ ಶಕ್ತಿ ತುಂಬುತ್ತದೆ ಎಂಬ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದರು.