ಕರ್ನಾಟಕ

karnataka

ETV Bharat / bharat

hyderpora gunfight​: ಹತನಾದ ಉಗ್ರನ ಕುಟುಂಬಸ್ಥರಿಂದ ಶವಕ್ಕಾಗಿ ಪ್ರತಿಭಟನೆ, ತನಿಖೆಗೆ ಆದೇಶ - ಉಗ್ರನ ಕುಟುಂಬದಿಂದ ಪ್ರತಿಭಟನೆ

ಶ್ರೀನಗರದ ಹೈದರ್‌ಪೋರಾದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ (hyderpora gunfight)ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ(Four militants killed by Indian Army)ಮಾಡಿತ್ತು. ಇದರಲ್ಲಿ ತಮ್ಮ ಮಗನನ್ನು ಉಗ್ರ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಲಾಗಿದೆ ಎಂದು ಹತನಾದ ಅಮೀರ್​ ಅಹ್ಮದ್​ ಮಗ್ರೆ ಎಂಬುವವನ ಕುಟುಂಬಸ್ಥರು ಶ್ರೀನಗರದಲ್ಲಿ ಪ್ರತಿಭಟನೆ(militant Amir Family protesting against army)ನಡೆಸುತ್ತಿದ್ದಾರೆ.

hyderpora gunfight
ಹತನಾದ ಉಗ್ರನ ಕುಟುಂಸ್ಥರಿಂದ ಶವಕ್ಕಾಗಿ ಪ್ರತಿಭಟನೆ

By

Published : Nov 18, 2021, 1:22 PM IST

ಜಮ್ಮು-ಕಾಶ್ಮೀರ:ಶ್ರೀನಗರದ ಹೈದರ್‌ಪೋರಾದಲ್ಲಿ (hyderpora gunfight)ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ (Four militants killed by Indian Army)ಮಾಡಿತ್ತು. ಇದರಲ್ಲಿ ತಮ್ಮ ಮಗನನ್ನು ಉಗ್ರ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಲಾಗಿದೆ ಎಂದು ಹತನಾದ ಅಮೀರ್​ ಅಹ್ಮದ್​ ಮಗ್ರೆ ಎಂಬುವವನ ಕುಟುಂಬಸ್ಥರು ಶ್ರೀನಗರದಲ್ಲಿ ಪ್ರತಿಭಟನೆ (militant Amir Family protesting against army) ನಡೆಸುತ್ತಿದ್ದಾರೆ.

ಅಲ್ಲದೇ, ಅಮೀರ್​ನ ದೇಹವನ್ನು ಹಸ್ತಾಂತರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ಇದನ್ನು ಜಮ್ಮು ಪೊಲೀಸರು ನಿರಾಕರಿಸಿದ್ದಾರೆ. ಮಂಗಳವಾರದಂದು ಶ್ರೀನಗರದ ಹೈದರ್‌ಪೋರಾ ಪ್ರದೇಶದ ಖಾಸಗಿ ಕಟ್ಟಡದಲ್ಲಿರುವ ಕಾಲ್ ಸೆಂಟರ್​ವೊಂದರಲ್ಲಿ ನಾಲ್ವರು ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಜಮ್ಮು-ಕಾಶ್ಮೀರ ಪೊಲೀಸರು, CRPF ಯೋಧರು ಜಂಟಿ ಕಾರ್ಯಾಚರಣೆ ನಡೆಸಿ 4 ಉಗ್ರರನ್ನು ಹತ್ಯೆ ಮಾಡಿದ್ದರು. ಉಗ್ರರನ್ನು ಅಲ್ತಾಫ್ ಅಹ್ಮದ್, ಮುದಾಸಿರ್ ಅಹ್ಮದ್, ಅಮೀರ್ ಮತ್ತು ಹೈದರ್ ಅಕಾ ಬಿಲಾಲ್ ಭಾಯಿ ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ: ಹೈದರಾಪೊರಾ ಎನ್​ಕೌಂಟರ್ ವಿರುದ್ಧ ಪ್ರತಿಭಟನೆ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸ್​

ಆದರೆ, ಇದರಲ್ಲಿ ಹತ್ಯೆಗೀಡಾದ ಅಮೀರ್​ ಉಗ್ರಗಾಮಿಯಲ್ಲ ಎಂದು ರಾಂಬನ್​ ಜಿಲ್ಲೆಯ ಸಂಗಲ್ದನ್​ ಗೂಲ್​ ನಿವಾಸಿಯಾಗಿರುವ ಅವರ ಕುಟುಂಬಸ್ಥರು ಹೇಳುತ್ತಿದ್ದಾರೆ. ಅಮೀರ್​ ಕಾರ್ಮಿಕನಾಗಿ ಶ್ರೀನಗರದಲ್ಲಿ ದುಡಿಯುತ್ತಿದ್ದ. ಅವನು ಯಾವುದೇ ಉಗ್ರಗಾಮಿ ಸಂಘಟನೆ ಜತೆ ಗುರುತಿಸಿಕೊಂಡಿರಲಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹತ್ಯೆಗೀಡಾದ ಅಮೀರ್​ ಮೃತದೇಹವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕುಟುಂಬಸ್ಥರ ಕೋರಿಕೆ ನಿರಾಕರಿಸಿರುವ ಪೊಲೀಸರು, ಹತನಾದ ಅಮೀರ್​ ಪಾಕಿಸ್ತಾನದ ಉಗ್ರಗಾಮಿ ಹೈದರ್ ಅಕಾ ಬಿಲಾಲ್ ಭಾಯಿ ಸಹಚರನಾಗಿ ಕೆಲಸ ಮಾಡುತ್ತಿದ್ದ. ಹೈದರ್​ ಜೊತೆಗೂಡಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ. ಅಮೀರ್ ಸಂಬಂಧಿಕರ ಪ್ರತಿಭಟನೆ ಹಿನ್ನೆಲೆ ರಾಂಬನ್‌ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಹೈದರ್​​​ಪೋರಾ ಎನ್​​​​ಕೌಂಟರ್​​​​​​ ತನಿಖೆಗೆ ಆದೇಶಿಸಿದ ಉಪರಾಜ್ಯಪಾಲರು

ಈ ನಡುವೆ ಎನ್​​​ಕೌಂಟರ್​​​​​ ಸಂಬಂಧ ಮ್ಯಾಜಿಸ್ಟ್ರೇಟಿಯಲ್​ ತನಿಖೆಗೆ ಜಮ್ಮು ಕಾಶ್ಮೀರದ ಉಪ ರಾಜ್ಯಪಾಲರು ಆದೇಶಿಸಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಉಪ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ. ಎನ್​ಕೌಂಟರ್​​​ಗೆ ರಾಜಕೀಯ ಪಕ್ಷಗಳು ಸಹ ಖಂಡನೆ ವ್ಯಕ್ತಪಡಿಸಿವೆ.

ABOUT THE AUTHOR

...view details