ಕರ್ನಾಟಕ

karnataka

ETV Bharat / bharat

ಟಾಲಿವುಡ್ ನಟಿ ಮೇಲೆ ಹಲ್ಲೆ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿಗಳು - ಟಾಲಿವುಡ್ ನಟಿ ಮೇಲೆ ಹಲ್ಲೆ

ರಾತ್ರಿ ವೇಳೆ ಪಾರ್ಕ್​ನಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಟಾಲಿವುಡ್​ ನಟಿ(Attack on Actress)ಯೋರ್ವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ..

Tollywood actress
Tollywood actress

By

Published : Nov 15, 2021, 4:24 PM IST

ಹೈದರಾಬಾದ್​:ಟಾಲಿವುಡ್​ನ ಉದಯೋನ್ಮುಖ ನಟಿಯೋರ್ವಳ ಮೇಲೆ ಹಲ್ಲೆ ನಡೆಸಿ ಅಪರಿಚಿತ ದುಷ್ಕರ್ಮಿಗಳು ಮೊಬೈಲ್​ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಟೋನಿ ಬಂಜಾರಾ ಹಿಲ್ಸ್​​ನ ಕೆಬಿಆರ್​ ಪಾರ್ಕ್​(KBR park in Hyderabad) ಬಳಿ ನಡೆದಿದೆ.

ರಾತ್ರಿ ವೇಳೆ ಪಾರ್ಕ್​ನಲ್ಲಿ ನಟಿ ಶಾಲು ಚೌರಾಸಿಯಾ(attack on actress chaurasia) ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಸಂಪೂರ್ಣ ವಿವರ

ಟಾಲಿವುಡ್ ನಟಿ ಶಾಲು ಚೌರಾಸಿಯಾ

ನಟಿ ಶಾಲು(actress shalu Chourasia complaint) ಪಾರ್ಕ್​ನಲ್ಲಿ ಮೊಬೈನಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಅಲ್ಲಿಗೆ ಆಗಮಿಸಿರುವ ವ್ಯಕ್ತಿಯೋರ್ವ ಹಣ ಹಾಗೂ ಚಿನ್ನಾಭರಣ ಕೊಡುವಂತೆ ಕೇಳಿದ್ದಾನೆ.

ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ದಾಳಿ(attack on heroine) ನಡೆಸಿ, ಮೊಬೈಲ್​ ಕಿತ್ತು ಪರಾರಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ನಟಿ ಖುದ್ದಾಗಿ ಪೊಲೀಸರಿಗೆ ದೂರು ದಾಖಲು ಮಾಡಿದ್ದಾಳೆ.

ಇದನ್ನೂ ಓದಿರಿ:ಟಿ20 ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾಗೆ 12 ಕೋಟಿ ರೂ. ನಗದು ಬಹುಮಾನ: ಭಾರತಕ್ಕೆ ಸಿಕ್ಕಿದ್ದೆಷ್ಟು?

ಘಟನೆಯಿಂದ ನಟಿಯ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಗಾಯವಾಗಿವೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿರುವ ಬಂಜಾರ್ ಹಿಲ್ಸ್​ ಪೊಲೀಸರು ಪಾರ್ಕ್​ನಲ್ಲಿನ ಸಿಸಿಟಿವಿ ದೃಶ್ಯ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.

ABOUT THE AUTHOR

...view details