ಕರ್ನಾಟಕ

karnataka

ETV Bharat / bharat

ಮನೆಮನೆಗೆ ಸುದ್ದಿಪತ್ರಿಕೆ ಹಾಕಿ ತಂದೆಯ ಆರ್ಥಿಕ ಹೊರೆ ಕಡಿಮೆ ಮಾಡಿದ ಸಹೋದರಿಯರು

ತಂದೆಯ ಆರ್ಥಿಕ ತೊಂದರೆಗಳನ್ನು ಗಮನಿಸುತ್ತಿದ್ದ ಸಹೋದರಿಯರು ಹೈದರಾಬಾದ್​ನಲ್ಲಿ ಸುದ್ದಿಪತ್ರಿಕೆ ಹಂಚಿ ಅಪ್ಪನ ಭಾರ ಹಂಚಿಕೊಂಡಿದ್ದಾರೆ.

Hyderabad paper girls
ಹೈದರಾಬಾದ್ ಪೇಪರ್ ಗರ್ಲ್ಸ್

By

Published : Dec 2, 2021, 5:45 PM IST

ಹೈದರಾಬಾದ್​ (ತೆಲಂಗಾಣ):ವಿದ್ಯಾಭ್ಯಾಸದ ಜೊತೆ ಈ ಅಕ್ಕ- ತಂಗಿ ತಂದೆಯ ಆರ್ಥಿಕ ಹೊರೆ ಕಡಿಮೆ ಮಾಡುತ್ತಿದ್ದಾರೆ. ಬೆಳಗಾಗುವ ಮೊದಲೇ ಎದ್ದು ಮನೆಮನೆಗೆ ತೆರಳಿ ಸುದ್ದಿಪತ್ರಿಕೆ ಹಾಕುತ್ತಾ ಹೈದರಾಬಾದ್ ಪೇಪರ್ ಗರ್ಲ್ಸ್ ಆಗಿದ್ದಾರೆ.

20 ವರ್ಷಗಳ ಹಿಂದೆ ಮಹಬೂಬ್‌ನಗರ ಜಿಲ್ಲೆಯ ರಾಮದಾಸ್‌ ನಾಯಕ್‌ ಎಂಬವರು ಜೀವನೋಪಾಯಕ್ಕೆ ಉದ್ಯೋಗ ಅರಸಿ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಹಿರಿಯ ಮಗಳು ಪ್ರಮಿಳಾ ಇಂಟರ್ ಮೀಡಿಯೇಟ್ ಪ್ರಥಮ ವರ್ಷದಲ್ಲಿ ಓದುತ್ತಿದ್ದರೆ, ಕಿರಿಯವಳು ಪವಿತ್ರಾ 10ನೇ ತರಗತಿ ಓದುತ್ತಿದ್ದಾಳೆ. ರಾಮದಾಸ್ ಮತ್ತು ಅವರ ಕುಟುಂಬ ಬೋರಬಂಡಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಮನೆಮನೆಗೆ ಸುದ್ದಿಪತ್ರಿಕೆ ಹಾಕಿ ತಂದೆಯ ಆರ್ಥಿಕ ಹೊರೆ ಕಡಿಮೆ ಮಾಡಿದ ಸಹೋದರಿಯರು

ರಾಮದಾಸ್ ತಮ್ಮ ಆರಂಭಿಕ ವರ್ಷಗಳಲ್ಲಿ ಹೈದರಾಬಾದ್‌ನಲ್ಲಿ ಪೇಪರ್‌ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಅವರು ಪತ್ರಿಕಾ ವಿತರಣಾ ಏಜೆನ್ಸಿಯೊಂದನ್ನು ಸ್ಥಾಪಿಸಿದರು. ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸಲು ಪೇಪರ್‌ಬಾಯ್ಸ್‌ಗಳನ್ನು ನೇಮಿಸಿಕೊಂಡರು.

ಆದರೆ, ಈ ಕೆಲಸದಲ್ಲಿ ಆಸಕ್ತಿ ತೋರಿಸುವ ಜನರಲ್ಲಿ ಇಳಿಮುಖವಾದಾಗ, ಅವರ ಹೆಣ್ಣುಮಕ್ಕಳೇ ಭಾನುವಾರ ಮತ್ತು ರಜಾದಿನಗಳಲ್ಲಿ ಪತ್ರಿಕೆಗಳನ್ನು ವಿತರಿಸಲು ಆರಂಭಿಸಿದರು. ಬಳಿಕ ತಾವೇ ಏಜೆಂಟ್​ಗಳಾಗಿ ನಿತ್ಯ ಮುಂಜಾನೆ 4 ಗಂಟೆಗೆ ಎದ್ದು ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳಾ ರೋಗಿಗಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ವೈದ್ಯ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಾಗ!

ಎಂದಿಗೂ ವಿದ್ಯಾಭ್ಯಾಸ ಕಡೆಗಣಿಸುವುದಿಲ್ಲ

ಮೊದಮೊದಲು ಸೈಕಲ್‌ನಲ್ಲಿ ತೆರಳುತ್ತಿದ್ದ ಇವರಿಗೆ ರಾಮದಾಸ್ ಇಎಂಐ ಮೂಲಕ ದ್ವಿಚಕ್ರ ವಾಹನ ಕೊಡಿಸಿದ್ದಾರೆ. ಪತ್ರಿಕೆ ಏಜೆನ್ಸಿಯಿಂದ ಮೊದಲಿನಷ್ಟು ಆದಾಯ ಬರುತ್ತಿಲ್ಲ. ಆದರೆ, ಈ ಕೆಲಸ ಮಾಡದೇ ಇರಲು ಸಾಧ್ಯವಿಲ್ಲ. ತಮ್ಮ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದು ರಾಮ್​ದಾಸ್​ ಹೇಳುತ್ತಾರೆ.

ಐಪಿಎಸ್ ಅಧಿಕಾರಿಯಾಗುವ ಗುರಿ

"ನಾವು ನಮ್ಮ ತಂದೆಯ ಆರ್ಥಿಕ ತೊಂದರೆಗಳನ್ನು ಗಮನಿಸುತ್ತಿದ್ದೆವು. ನಾವಿಬ್ಬರೂ ಅವರಿಗೆ ಸಾಧ್ಯ ಇರುವ ರೀತಿಯಲ್ಲಿ ಸಹಾಯ ಮಾಡಲು ಬಯಸಿದ್ದೆವು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್‌ಗಳಿಗೆ ಅಂಟಿಕೊಂಡಿದ್ದಾರೆ. ಅದರ ಬದಲಿಗೆ ಬಿಡುವಿನ ವೇಳೆಯಲ್ಲಿ ನಾವು ಬಹಳಷ್ಟು ಕಲಿಯಬಹುದು. ನಾನು ಯಾವುದೇ ರೀತಿಯ ಕೆಲಸ ಮಾಡಬಲ್ಲೆ ಎಂಬ ನಂಬಿಕೆ ನನಗಿದೆ.

ನಮ್ಮ ಪೋಷಕರಿಗೆ ಸಹಾಯ ಮಾಡುವುದು ಮುಖ್ಯ. ಐಪಿಎಸ್ ಅಧಿಕಾರಿಯಾಗುವುದು ನನ್ನ ಗುರಿ. ನನ್ನ ತಂಗಿ ಮತ್ತು ನಾನು ನಮ್ಮ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸದೇ ಈ ಕೆಲಸ ಮಾಡುತ್ತಿದ್ದೇವೆ" ಎಂದು ಪ್ರಮಿಳಾ ತಿಳಿಸಿದರು.

"ನಾನು 5 ನೇ ತರಗತಿಯಲ್ಲಿದ್ದಾಗಿನಿಂದ ನನ್ನ ತಂದೆಗೆ ಸಹಾಯ ಮಾಡುತ್ತಿದ್ದೇನೆ. ಹಿಂದೆ, ನಾವು ರಜಾದಿನಗಳಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಿದ್ದೆವು. ಆದರೆ, ಅವರ ಕಷ್ಟಗಳನ್ನು ನೋಡಿ ನಾನು ಮತ್ತು ನನ್ನ ಅಕ್ಕ ನಿತ್ಯ ಈ ಕೆಲಸ ಮಾಡಲು ನಿರ್ಧರಿಸಿದ್ದೇವೆ.

ನಾವು ಪತ್ರಿಕೆಗಳನ್ನು ತಲುಪಿಸುವ ಈ ಪ್ರದೇಶದ ಜನರು ನಮ್ಮ ಮೇಲೆ ಕರುಣೆ ತೋರಿಸುತ್ತಾರೆ. ಅವರು ನಮಗೆ ಸಲಹೆಗಳನ್ನು ಮತ್ತು ಎಚ್ಚರಿಕೆಯ ಮಾತುಗಳನ್ನು ನೀಡುತ್ತಾರೆ " ಎಂದು ರಾಮದಾಸ್ ಅವರ ಕಿರಿಯ ಮಗಳು ಪವಿತ್ರಾ ಹೇಳಿದರು.

ABOUT THE AUTHOR

...view details