ಹೈದರಾಬಾದ್: ಫೆಬ್ರವರಿ 8ರಂದು ಅಪಹರಣವಾಗಿದ್ದ ಬಾಲಕನನ್ನು ರಕ್ಷಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪಹರಣವಾಗಿದ್ದ ಮಗು ರಕ್ಷಿಸಿ ಪಾಲಕರ ಮಡಿಲು ಸೇರಿಸಿದ ಪೊಲೀಸರು - Child abduction in Hyderabad
ಹೈದರಾಬಾದ್ನಲ್ಲಿ ಅಪಹರಣವಾಗಿದ್ದ ಬಾಲಕನನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈದರಾಬಾದ್ನಲ್ಲಿ ಬಾಲಕನ ಅಪಹರಣ ಪ್ರಕರಣ ಸುಖ್ಯಾಂತ
ರುದ್ರಮಣಿ ಶಿವಶಂಕರ್ (3) ಎಂಬ ಬಾಲಕನನ್ನು ನಾಂಪಲ್ಲಿ ಸಾರ್ವಜನಿಕ ಉದ್ಯಾನವನದಲ್ಲಿ ಅಪಹರಿಸಲಾಗಿತ್ತು. ಘಟನೆ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪ್ರಕರಣ ಬೆನ್ನಟ್ಟಿದಾಗ ಬಾಲಕ ಮಹಾರಾಷ್ಟ್ರದಲ್ಲಿ ಇರುವುದು ಪತ್ತೆಯಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿ ಮಲ್ಗವ್ ಜಿಲ್ಲೆಯ ಶಾಮ್ ಸೋಲಂಕಿ ಎಂಬಾತನನ್ನು ಬಂಧಿಸಿ ಬಾಲಕನನ್ನು ರಕ್ಷಿಸಿದ್ದಾರೆ ಎಂದು ಸಿಪಿ ಅಂಜನಿ ಕುಮಾರ್ ಮಾಹಿತಿ ನೀಡಿದ್ದಾರೆ. ಸದ್ಯ ಮಗು ಪೊಲೀಸರ ಸಹಾಯದಿಂದ ಹೆತ್ತವರ ಮಡಿಲು ಸೇರಿದೆ.