ಕರ್ನಾಟಕ

karnataka

ETV Bharat / bharat

ಪಬ್​ನೊಳಗೆ 3 ವರ್ಷದ ಹೆಣ್ಣು ಮಗುವಿಗೂ ಪ್ರವೇಶ: ಪಬ್ ಮಾಲೀಕರಿಗೆ ಪೊಲೀಸರ ನೋಟಿಸ್​​ - gachibowli pub news

ಹೈದರಾಬಾದ್​ನಲ್ಲಿ ಮೂರು ವರ್ಷದ ಬಾಲಕಿಗೆ ಪಬ್​ನೊಳಗೆ ಪ್ರವೇಶಾವಕಾಶ ನೀಡಿದ್ದ ಆರೋಪದಲ್ಲಿ ಪಬ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.

hyderabad-police-notices-to-wall-street-pub-for-allowing-girl-child
ಪಬ್​ನೊಳಗೆ ಮೂರು ವರ್ಷದ ಹೆಣ್ಣು ಮಗುವಿಗೆ ಪ್ರವೇಶ: ಪಬ್ ಮಾಲೀಕರಿಗೆ ಪೊಲೀಸರ ನೋಟಿಸ್​​

By

Published : Sep 1, 2021, 8:10 PM IST

ಹೈದರಾಬಾದ್(ತೆಲಂಗಾಣ):ಪಬ್​ನೊಳಗೆ ಮೂರು ವರ್ಷದ ಹೆಣ್ಣು ಮಗುವಿಗೆ ಪ್ರವೇಶ ನೀಡಿದ್ದಕ್ಕೆ ಹೈದರಾಬಾದ್​​ನ ವಾಲ್​​ಸ್ಟ್ರೀಟ್​ ಪಬ್​ನ ಆಯೋಜಕರಿಗೆ ಸಂಕಷ್ಟ ಎದುರಾಗಿದ್ದು, ಹೈದರಾಬಾದ್ ಪೊಲೀಸರು ನೋಟಿಸ್​ ನೀಡಿದ್ದಾರೆ.

ಹೈದರಾಬಾದ್​ನ ಗಚ್ಚಿಬೌಲಿಯಲ್ಲಿರುವ ವಾಲ್​​ಸ್ಟ್ರೀಟ್​ ಪಬ್​​ಗೆ ತನ್ನ ಕುಟುಂಬದವರೊಂದಿಗೆ ಮೂರು ವರ್ಷದ ಬಾಲಕಿ ಕೂಡಾ ಬಂದಿದ್ದಳು. ಇದನ್ನು ಓರ್ವ ವ್ಯಕ್ತಿ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು.

ಈ ವಿಡಿಯೋ ನೋಡಿದ ಪೊಲೀಸರು, ಬಾಲಕಿಗೆ ಯಾವ ರೀತಿಯಲ್ಲಿ ಪಬ್​ಗೆ ಅನುಮತಿ ನೀಡಲಾಯಿತು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವುದು ಮಾತ್ರವಲ್ಲದೇ, ಪಬ್​ನ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಪಬ್​ನೊಳಗೆ ಮೂರು ವರ್ಷದ ಹೆಣ್ಣು ಮಗು ಕುಣಿಯುತ್ತಿರುವ ವಿಡಿಯೋ

ಪಬ್​ ಒಳಗಿನ ಸಿಸಿಟಿವಿ ಕ್ಯಾಮರಾಗಳನ್ನು ಕೂಡಾ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಇದನ್ನೂ ಓದಿ:Afghanistan: ಪಂಜ್‌ಶೀರ್‌ಗೆ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಿದ ತಾಲಿಬಾನ್‌!

ABOUT THE AUTHOR

...view details