ಕರ್ನಾಟಕ

karnataka

ETV Bharat / bharat

ಕತಾರ್‌ನಲ್ಲಿ ಸಿಲುಕಿದ 'ಕರುಳಿನ ಕುಡಿ'ಯನ್ನು ದೇಶಕ್ಕೆ ಕರೆ ತರಲು ಕೋರಿ ವಿದೇಶಾಂಗ ಸಚಿವರಿಗೆ ತಾಯಿಯ ಪತ್ರ - ಹೈದರಾಬಾದ್​ ಆಲಿಯಾ

ಉದ್ಯೋಗದ ನಿಮಿತ್ತ ಕತಾರ್​ಗೆ ತೆರಳಿದ್ದ ಮಗಳನ್ನು ಮರಳಿ ದೇಶಕ್ಕೆ ಕರೆತರಲು ಒತ್ತಾಯಿಸಿ ತಾಯಿ ವಿದೇಶಾಂಗ ಸಚಿವ ಎಸ್​ ಜೈ ಶಂಕರ್​ಗೆ ಪತ್ರ ಬರೆದಿದ್ದಾರೆ..

Qatar
ವಿದೇಶಾಂಗ ಸಚಿವರಿಗೆ ತಾಯಿಯ ಪತ್ರ

By

Published : Jun 22, 2021, 3:38 PM IST

ಹೈದರಾಬಾದ್ (ತೆಲಂಗಾಣ): ಕಳೆದ 20 ತಿಂಗಳಿನಿಂದ ಕತಾರ್‌ನ ದೋಹಾದಲ್ಲಿ ಸಿಲುಕಿಕೊಂಡಿರುವ ಮಗಳು ಆಲಿಯಾ ಬೇಗಂ ಅವರನ್ನು ರಕ್ಷಿಸಿ ದೇಶಕ್ಕೆ ಮರಳಿ ಕರೆತರುವಂತೆ ಒತ್ತಾಯಿಸಿ ಹೈದರಾಬಾದ್ ನಿವಾಸಿ ಅತಿಯಾ ಬೇಗಂ ವಿದೇಶಾಂಗ ಸಚಿವ ಎಸ್​​.ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

"ನನ್ನ ಮಗಳು ಆಲಿಯಾ ಬೇಗಂ ಉದ್ಯೋಗದ ನಿಮಿತ್ತ ಕತಾರ್​ಗೆ ತೆರಳಿದ್ದಳು. ಟ್ರಾವೆಲ್ ಏಜೆಂಟ್ ಮುನೀರ್ ಅವರನ್ನು ಸಂಪರ್ಕಿಸಿ ಕತಾರ್‌ನ ದೋಹಾದ ಬ್ಯೂಟಿ ಪಾರ್ಲರ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಲು ನಿರ್ಧರಿಸಿ ಅಲ್ಲಿಗೆ ಹೋಗಿದ್ದಾಳೆ. 2018ರ ನವೆಂಬರ್‌ನಲ್ಲಿ ಕತಾರ್‌ನ ದೋಹಾದ ಬಳಿಯ ಬ್ಯೂಟಿ ಪಾರ್ಲರ್‌ಗೆ ಸೇರಿಕೊಂಡು 14 ತಿಂಗಳು ಅಲ್ಲಿ ಕೆಲಸ ಮಾಡಿದ್ದಾಳೆ. ಆದರೆ, ಆ ಬಳಿಕ ಪಾರ್ಲರನ್ನು ಮುಚ್ಚಲಾಯಿತು. ಮತ್ತೆ ಅಲ್ಲಿಂದ ಬೇರೆಡೆಗೆ ಉದ್ಯೋಗ ಅರಸಿ ಹೋಗಿದ್ದಾಳೆ. ಅಲ್ಲಿ ಸುಮಾರು 6 ತಿಂಗಳು ಕೆಲಸ ಮಾಡಿದ್ದಾಳೆ" ಎಂದು ತಾಯಿ ಅತಿಯಾ ಬೇಗಂ ಹೇಳಿದ್ದಾರೆ.

"ಅಲ್ಲಿ ಆಲಿಯಾಗೆ ಸರಿಯಾದ ವೈದ್ಯಕೀಯ ವ್ಯವಸ್ಥೆ ಸಿಗುತಿಲ್ಲ. ಸಂಬಳ, ಆಹಾರ ಮತ್ತು ವಸತಿ ಸೌಕರ್ಯ ಕೂಡ ಸರಿಯಾಗಿ ನೀಡುತ್ತಿಲ್ಲ. ಆಗಸ್ಟ್ 2020ರ ಸಮಯದಲ್ಲಿ ಅವಳು ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಹೀಗಾಗಿ, ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ಅವಳಿಗೆ ಕೆಲಸ ಕೊಡಿಸಿದ ವ್ಯಕ್ತಿ ಆಲಿಯಾ ಮೇಲೆ ಕೇಸ್​ ದಾಖಲಿಸಿದ್ದಾಳೆ.

ಅಲ್ಲಿಂದ ಪೊಲೀಸರು ಆಕೆಯನ್ನು ಬಂಧಿಸಿ ಆರು ತಿಂಗಳು ಜೈಲಿನಲ್ಲಿರಿಸಿದ್ದಾರೆ. ಆದರೆ, ಮತ್ತೆ ಬಂದ ಉದ್ಯೋಗ ನೀಡಿದ ಮಹಿಳೆ ಆಲಿಯಾಳನ್ನು ಜೈಲಿನಿಂದ ಬಿಡುಗಡೆಗೊಳಿಸಿ ತನ್ನ ಮನೆಯಲ್ಲಿ ಕೆಲಸದಾಳಾಗಿ ಇರುವಂತೆ ಒತ್ತಾಯಿಸಿದ್ದಾಳೆ" ಎಂದು ಅಳಲು ತೋಡಿಕೊಂಡಿದ್ದಾರೆ.

"ಜನವರಿ 2021ರ ಸಮಯದಲ್ಲಿ ಆಲಿಯಾಳನ್ನು ಒಂದು ರೆಸ್ಟೋರೆಂಟ್‌ನಲ್ಲಿ ಪರಿಚಾರಿಕಿಯಾಗಿ ಕೆಲಸ ಮಾಡಲು ಹೇಳಲಾಯಿತು. ಅವಳಿಗೆ ಕೆಲಸ ನೀಡಿದ ಮಹಿಳೆ ಆಕೆಗೆ ಕಿರುಕುಳ ನೀಡುತ್ತಿದ್ದಾಳೆ. ಸರಿಯಾದ ಸಂಬಳ, ಆಹಾರ ಮತ್ತು ವಸತಿ ನೀಡುತ್ತಿಲ್ಲ. ಭಾರತಕ್ಕೆ ಮರಳುತ್ತೇನೆ ಎಂದು ಹೇಳುತ್ತಿದ್ದಾಳೆ. ಆದರೆ, ನಿರ್ಬಂಧದ ಹಿನ್ನೆಲೆಯಲ್ಲಿ ಕಷ್ಟವಾಗುತ್ತಿದೆ" ಎಂದು ತಾಯಿ ಕಣ್ಣೀರು ಹರಿಸಿ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ.

ABOUT THE AUTHOR

...view details