ಹೈದರಾಬಾದ್: ಸಿಕಂದರಾಬಾದ್‌ನಲ್ಲಿ ಅಗ್ನಿಪಥ್ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಹೈದರಾಬಾದ್ ಮೆಟ್ರೋ ರೈಲುಗಳು ಮತ್ತು ಎಂಎಂಟಿಸಿ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಎಲ್ಲಾ ಮಾರ್ಗಗಳಲ್ಲಿ ರೈಲುಗಳನ್ನು ರದ್ದುಗೊಳಿಸುವುದಾಗಿ ಮೆಟ್ರೋ ಎಂಡಿ ಘೋಷಿಸಿದ್ದಾರೆ.
ಫಲಕ್ನಾಮಾದಿಂದ ಲಿಂಗಂಪಲ್ಲಿಗೆ ಸಂಚರಿಸುತ್ತಿದ್ದ 12 ಎಂಎಂಟಿಎಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೆ ಲಿಂಗಂಪಲ್ಲಿಯಿಂದ ಫಲಕ್ನಾಮಾಗೆ ಸಂಚರಿಸುತ್ತಿದ್ದ 13 ಎಂಎಂಟಿಎಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಚಿಗುಡ ಠಾಣಾಧಿಕಾರಿ ಪ್ರಭುಚರಣ್ ವಿವರ ಬಹಿರಂಗಪಡಿಸಿದ್ದಾರೆ.