ಹೈದರಾಬಾದ್, ತೆಲಂಗಾಣ:ಕೆಲವು ದಿನಗಳ ಹಿಂದೆ ಅಪಹರಣ ಮತ್ತು ಅತ್ಯಾಚಾರದ ಕತೆ ಕಟ್ಟಿದ್ದ ವಿದ್ಯಾರ್ಥಿನಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಆಕೆ ಬಿ ಫಾರ್ಮಾ ವಿದ್ಯಾರ್ಥಿನಿಯಾಗಿದ್ದು, ಮನೆಯಿಂದ ಓಡಿ ಹೋಗಿ ಹೈದರಾಬಾದ್ ಹೊರವಲಯದಲ್ಲಿರುವ ಘಟ್ಕೇಸರ್ನಲ್ಲಿ ತಮ್ಮ ಅಂಕಲ್ ಮನೆಯಲ್ಲಿ ವಾಸವಿದ್ದಾಗ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ:ಪುದುಚೇರಿ ಗೇಮ್ ಪ್ಲಾನ್ ಮಹಾರಾಷ್ಟ್ರದಲ್ಲಿ ನಡೆಯಲ್ಲ: ಬಿಜೆಪಿಗೆ ಸಂಜಯ್ ರಾವತ್ ಟಾಂಗ್
ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಹೈದರಾಬಾದ್ನ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ನಿಜಕ್ಕೂ ನಡೆದಿದ್ದೇನು?
ಕಾಲೇಜ್ ಮುಗಿಸಿಕೊಂಡು ಫೆಬ್ರವರಿ 10ರಂದು ಆಟೋದಲ್ಲಿ ಯುವತಿ ಒಂಟಿಯಾಗಿಯೇ ಪ್ರಯಾಣಿಸುತ್ತಿದ್ದ ವೇಳೆ ಆಟೋ ಡ್ರೈವರ್ ಆಕೆಯನ್ನು ಅಪರಿಸಿದ್ದಾಗಿ ಆಕೆ ಹೇಳಿಕೆ ನೀಡಿದ್ದಳು. ಈ ವಿಚಾರವನ್ನು ಫೋನ್ ಮಾಡಿ ಮನೆಗೆ ತಿಳಿಸಿದ್ದು, ಪೊಲೀಸರು ಕೂಡ ತನಿಖೆ ಶುರು ಮಾಡಿದ್ದರು.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬಹಿರಂಗವಾಗಿದ್ದು, ರಾತ್ರಿ ಮನೆಗೆ ತಡವಾಗಿ ಹೋಗುವ ಕುರಿತು ಪೋಷಕರ ಭಯದಿಂದ ವಿದ್ಯಾರ್ಥಿನಿ ಅಪಹರಣದ ಕತೆ ಕಟ್ಟಿರುವುದು ಗೊತ್ತಾಗಿದೆ.