ಹೈದರಾಬಾದ್: ಕಷ್ಟ ಎಂದರೆ ಆ ಕೆಲಸ ಮಾಡುವುದರಿಂದ ಹಿಂಜರಿಯುವವರ ಸಂಖ್ಯೆ ಹೆಚ್ಚು. ಆದರೆ, ಇದಕ್ಕೆ ಅಪವಾದ ಎನ್ನುವಂತಿದ್ದರೆ ಬಂಗಾರು ಲಕ್ಷ್ಮಿ ಪ್ರಸನ್ನ ಕಷ್ಟಗಳನ್ನು ಮೆಟ್ಟಿನಿಂತು ಸಾಧನೆ ಮಾಡಿ ಹಲವರಿಗೆ ಪ್ರೇರಣೆ ಆಗಿದ್ದಾರೆ ಈ ಯುವತಿ. ಚಾರ್ಟೆಡ್ ಅಕೌಂಟೆಂಟ್ (ಸಿಎ) ಮಾಡುವುದು ಹುಡುಗಿಯರಿಗೆ ಕಷ್ಟ ಎನ್ನುವವರ ಮಧ್ಯ ಆಲ್ ಇಂಡಿಯಾ ಮಟ್ಟದಲ್ಲಿ ಟ್ಯಾಪ್ ರ‍್ಯಾಂಕ್ ಗಳಿಸುವ ಮೂಲಕ ದಿಟ್ಟ ಉತ್ತರ ನೀಡಿದ್ದಾಳೆ 18 ವರ್ಷದ ಯುವತಿ.
ಸಾಧಕಿ ಹಿನ್ನೆಲೆ ಏನು?:ನಮ್ಮದು ಹೈದರಾಬಾದ್, ನಮ್ಮ ಪೋಷಕರು ರಂಗ ರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ಹಿರಿಯ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಕೋರ್ಟ್ಗೆ ಚಾರ್ಟೆಡ್ ಅಕೌಂಟೆಡ್ ಬರುತ್ತಿದ್ದನ್ನು ನೋಡುತ್ತಿದ್ದ ಪೋಷಕರಿಗೆ ತಮ್ಮ ಮಗಳನ್ನು ಸಿಎ ಮಾಡಬೇಕು ಎಂಬ ಕನಸು ಶುರುವಾಯಿತು. ಈ ಕೋರ್ಸ್ ಕುರಿತು ಮಾಹಿತಿ ಪಡೆದರು. ಅದರಂತೆ ಸಿಎ ಆಗುವ ಕನಸು ಕೂಡ ನನ್ನನ್ನಲಿ ಮೊಳಕೆ ಒಡೆಯಿತು. ಈ ವೇಳೆ, ಸಿಎ ಬಲು ಕಷ್ಟ. ಹುಡುಗಿಯರಿಂದ ಇದು ಸಾಧ್ಯವಿಲ್ಲ ಎಂಬ ನಿರುತ್ಸಾಹದ ಮಾತುಗಳು ಕೂಡ ಎಲ್ಲರಿಂದ ಕೇಳಿ ಬಂದವು ಎನ್ನುತ್ತಾರೆ ಬಂಗಾರು ಲಕ್ಷ್ಮಿ ಪ್ರಸನ್ನ
ಪ್ರತಿಯೊಬ್ಬರು ಬಾಲ್ಯದಿಂದಲೇ ನಾನು ಏನಾದರೂ ವಿಭಿನ್ನವಾಗಿ ಸಾಧನೆ ಮಾಡಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಸಿಎ ಮಾಡುವುದು ಕೂಡ ನನಗೆ ಸವಾಲಾಗಿ ಪರಿಣಮಿಸಿದರೂ ಅದನ್ನೇ ಮಾಡಬೇಕು ಎಂದು ನಿರ್ಧರಿಸಿದೆ. ಇಂಟರ್ ಪರೀಕ್ಷೆ ಪಾಸ್ ಆದ ಬಳಿಕ ನಾನು ಮಾಸ್ಟರ್ ಮೈಂಡ್ ಆರ್ಗನೈಸೇಷನ್ ಸೇರಿದೆ. ಬೆಳಗ್ಗೆ 8 ರಿಂದ ಸಂಜೆ 8ರವರೆಗೆ ತರಬೇತಿ ಪಡೆಯುತ್ತಿದ್ದೆ. ವಾರಾಂತ್ಯದಲ್ಲಿ ಪರೀಕ್ಷೆ ಎದುರಿಸುತ್ತಿದ್ದೆ. ಈ ಎಲ್ಲ ಸಮಯಗಳು ಕಷ್ಟವಾಗುತ್ತಿತ್ತು. ಇದು ಒತ್ತಡದ ಭಾವನೆ ಮೂಡಿಸುತ್ತಿತ್ತು. ಆದರೆ, ನಾಲ್ವರಲ್ಲಿ ನಾನು ವಿಭಿನ್ನ ಆಗಬೇಕು ಎಂದು ಕಠಿಣ ಶ್ರಮವಹಿಸಿದೆ. ನಾನು ಪರೀಕ್ಷೆಯಲ್ಲಿ 350ಕ್ಕಿಂತ ಹೆಚ್ಚು ಅಂಕ ನಿರೀಕ್ಷೆ ಮಾಡಿದ್ದೆ. ಆದರೆ, ಸಿಎಂಎ ಫೌಂಡೇಶನ್ನಲ್ಲಿ 380 ಅಂಕ ಪಡೆಯುವ ಮೂಲಕ ಮೊದಲ ರ‍್ಯಾಂಕ್ ಪಡೆದೆ. ಕಠಿಣ ಶ್ರಮ ಯಾವಾಗಲೂ ಫಲ ನೀಡುತ್ತದೆ ಎಂಬುದನ್ನು ಕಾಣುತ್ತಿದ್ದೇನೆ.