ಹೈದರಾಬಾದ್:ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ಚುನಾವಣೆಯ ಫಲಿತಾಂಶ ಆಡಳಿತಾರೂಢ ಟಿಆರ್ಎಸ್ ಹಾಗು ವಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ಹೈದರಾಬಾದ್ ಪಾಲಿಕೆ ಚುನಾವಣೆ: ಪ್ರಗತಿಯಲ್ಲಿದೆ ಮತ ಎಣಿಕೆ ಕಾರ್ಯ - ಹೈದರಾಬಾದ್ ಪಾಳಿಕೆ ಚುನಾವಣೆ ಫಲಿತಾಂಶ ನೇರಪ್ರಸಾರ
ಗ್ರೇಟರ್ ಹೈದರಾಬಾದ್ ಮುನ್ಸಿಪಾಲಿಟಿ ಚುನಾವಣೆಯ(ಜಿಹೆಚ್‌ಎಂಸಿ) ಮತ ಎಣಿಕೆ ಕಾರ್ಯ ಕಾರ್ಯ ನಡೆಯುತ್ತಿದೆ. ಎಣಿಕಾ ಕಾರ್ಯ ನಡೆಯುವ ನಗರದ 30 ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 150 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 74.67 ಲಕ್ಷ ಮತದಾರರರಿದ್ದು, ಈ ಪೈಕಿ ಶೇ. 46.55 (34.50 ಲಕ್ಷ) ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ ಫಲಿತಾಂಶವು 11 ಗಂಟೆಯ ಸುಮಾರಿಗೆ ಹೊರಬೀಳುವ ನಿರೀಕ್ಷೆ ಇದೆ.
ಹೈದರಾಬಾದ್ ಪಾಳಿಕೆ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ
ನಗರದ 30 ಸ್ಥಳಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 8,152 ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ನಗರದ 150 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 74.67 ಲಕ್ಷ ಮತದಾರರ ಪೈಕಿ ಶೇ. 46.55 (34.50 ಲಕ್ಷ) ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ ಫಲಿತಾಂಶವು 11 ಗಂಟೆ ಸುಮಾರಿಗೆ ಹೊರಬೀಳುವ ಸಾಧ್ಯತೆ ಇದೆ.