ಹೈದರಾಬಾದ್(ತೆಲಂಗಾಣ):'ಮೇಕ್ ಇನ್ ಇಂಡಿಯಾ' ಯೋಜನೆಗೆ ಅನುಗುಣವಾಗಿ ಹೈದರಾಬಾದ್ ಮೂಲದ ಕಂಪನಿಯು ದೇಶದ ಭದ್ರತಾ ಪಡೆಗಳಿಗಾಗಿ ಕಣ್ಗಾವಲು ಉಪಕರಣಗಳನ್ನು ಸಂಶೋಧನೆ ಮಾಡಿ, ಅಭಿವೃದ್ಧಿಪಡಿಸುತ್ತಿದೆ. ಹೆಚ್ಸಿ ರೊಬೊಟಿಕ್ಸ್ (HC Robotics) ಎಂಬ ಕಂಪನಿ ಅಮೆರಿಕ ಮತ್ತು ಯುರೋಪ್ಲ್ಲಿನ ಸಂಶೋಧನಾ ಕೇಂದ್ರಗಳಿಂದಲೂ ಮಾನ್ಯತೆ ಪಡೆದಿದೆ.
ಮಾನವರಹಿತ ವೈಮಾನಿಕ ವಾಹನಗಳು (UAV), EOIR ಕ್ಯಾಮೆರಾಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಇಮೇಜ್ ಪ್ರೊಸೆಸಿಂಗ್ ವಿಚಾರಗಳಲ್ಲಿ ಪರಿಣತಿಯನ್ನು ಹೊಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‌ಸಿ ರೊಬೊಟಿಕ್ಸ್‌ನ ಪ್ರಾಜೆಕ್ಟ್ ಮ್ಯಾನೇಜರ್ ಡಾ.ದಿಲೀಪ್ ನಾವು ಡ್ರೋನ್‌ಗಳು, ಕ್ಯಾಮೆರಾಗಳು ಮತ್ತು ಟಾಕ್ ಟವರ್‌ಗಳನ್ನು ತಯಾರಿಸುತ್ತೇವೆ.
ಕಣ್ಗಾವಲು ಉದ್ದೇಶಗಳಿಗಾಗಿ ಇವುಗಳನ್ನು ಭಾರತದ ಗಡಿಗಳಲ್ಲಿರುವ ಭದ್ರತಾ ಪಡೆಗಳಿಗೆ ಪೂರೈಸುತ್ತೇವೆ ಎಂದಿದ್ದಾರೆ. ಕಂಪನಿ ಅಭಿವೃದ್ಧಿಪಡಿಸಿರುವ ಡ್ರೋನ್ಗಳ ಬಗ್ಗೆ ಮಾಹಿತಿ ನೀಡಿದ ಅವರು 5ಕೆಜಿ ಪೇಲೋಡ್(ಭಾರ) ಅನ್ನು 40 ನಿಮಿಷಗಳ ಹೊತ್ತೊಯ್ಯುವ ಸಾಮರ್ಥ್ಯವನ್ನು ಡ್ರೋನ್‌ಗಳು ಹೊಂದಿವೆ ಎಂದಿದ್ದಾರೆ.
ಈ ಡ್ರೋನ್‌ಗಳನ್ನು ವೈಮಾನಿಕ ಕಣ್ಗಾವಲು, ಮಿಲಿಟರಿ ಗುಪ್ತಚರ ಮಾಹಿತಿ ಸಂಗ್ರಹಣೆ, ಹುಡುಕಾಟ ಮತ್ತು ಇತರ ಕಾರ್ಯಾಚರಣೆಗಳನ್ನು ನಡೆಸಲು ಸಹಾಯಕವಾಗಬಹುದು. 4ಕೆ ರೆಸಲ್ಯೂಷನ್ ಇರುವ ಕ್ಯಾಮೆರಾಗಳನ್ನು ಸಹ ತಯಾರಿಸುತ್ತೇವೆ. 40 ಅಡಿ ಉದ್ದದ ಕಾರ್ಬನ್ ಫೈಬರ್ ಟ್ಯೂಬ್ ಅನ್ನು ತಯಾರಿಸುತ್ತಿದ್ದು, ಫೈಬರ್ ಟ್ಯೂಬ್ 40 ಅಡಿ ಎತ್ತರದಿಂದ ಸುಮಾರು 5 ಕಿಲೋಮೀಟರ್ ದೂರವನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ದಿಲೀಪ್ ಹೇಳಿದ್ದಾರೆ.
ಕೋವಿಡ್ ಮೊದಲನೇ ಅಲೆಯ ವೇಳೆ ಡ್ರೋನ್‌ಗಳು ನೀಡಿದ ಸೇವೆಯ ಕಾರಣದಿಂದಾಗಿ ಹೆಚ್ಸಿ ರೊಬೊಟಿಕ್ಸ್ ಕಂಪನಿಗೆ ರಾಚಕೊಂಡ ಪೊಲೀಸ್ ಕಮಿಷನರೇಟ್ ಅವರು 'ಗುಡ್ ಸಮರಿಟನ್' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳ ಸಂಶೋಧನಾ ಸಹಯೋಗಕ್ಕಾಗಿ ಐಐಟಿ ಹೈದರಾಬಾದ್, ಐಐಟಿ-ಡಿಎಂ ಕರ್ನೂಲ್, ಮುಂತಾದ ಸಂಸ್ಥೆಗಳೊಡನೆ ಹೆಚ್ಸಿ ರೊಬೋಟಿಕ್ಸ್ ಪಾಲುದಾರಿಕೆಯನ್ನು ಹೊಂದಿದೆ.
ನವೆಂಬರ್ 2018ರಲ್ಲಿ ಹೆಚ್ಸಿ ರೊಬೊಟಿಕ್ಸ್ ಅನ್ನು ಸ್ಥಾಪನೆ ಮಾಡಲಾಗಿದ್ದು, ಈ ಸಂಸ್ಥೆಯಲ್ಲಿ ತಜ್ಞರು, ಐಐಟಿ ಇಂಜಿನಿಯರ್‌ಗಳು, ಭಾರತ ಮತ್ತು ಅಮೆರಿಕದ ವಿವಿಧ ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ದಿಗ್ಗಜರಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಸದಸ್ಯರನ್ನು ಈ ಸಂಸ್ಥೆ ಹೊಂದಿದೆ.
ಇದನ್ನೂ ಓದಿ:ಆರೋಗ್ಯ ಸಂಬಂಧಿ 10 ಸ್ಟಾರ್ಟ್ಅಪ್ ಸಂಸ್ಥೆಗಳ ಸಹಾಯಕ್ಕೆ ಮುಂದಾದ ವಾಟ್ಸ್ಆ್ಯಪ್