ಹೈದರಾಬಾದ್ :ಮುತ್ತಿನ ನಗರಿ ಹೈದರಾಬಾದ್ ಜಗತ್ತಿನಲ್ಲಿ ವ್ಯಾಕ್ಸಿನೇಷನ್ನ ರಾಜಧಾನಿಯಾಗಿ ಬದಲಾಗಿದೆ ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಬಣ್ಣಿಸಿದ್ದು, ಇದು ಹೈದರಾಬಾದ್ಗೆ ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಬಯೋ ಏಷಿಯಾ ಕಾನ್ಫರೆನ್ಸ್-2021ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೆಟಿಆರ್, ಲಸಿಕೆ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್ ವಿಚಾರವಾಗಿ ಹೈದರಾಬಾದ್ ಅನ್ನು ಹೊಗಳಿದರು.
ತೆಲಂಗಾಣ ರಾಜ್ಯ ಸರ್ಕಾರ ಈ ಕಾನ್ಫರೆನ್ಸ್ ಅನ್ನು ಆಯೋಜಿಸಿದ್ದು, ಕೊರೊನಾ ಸೋಂಕಿನ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಔಷಧ ಮತ್ತು ಇತರ ವಲಯಗಳ ಕಂಪನಿಗಳು ಭಾಗಿಯಾಗಿದ್ದವು.