ಕರ್ನಾಟಕ

karnataka

ETV Bharat / bharat

ಹೈದರಾಬಾದ್​ ಏರ್​ಪೋರ್ಟ್​ಗೆ 'ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಪಟ್ಟ - ಸ್ಕೈಟ್ರಾಕ್ಸ್

ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಪಟ್ಟವನ್ನು ಸತತ ಮೂರನೇ ಬಾರಿಗೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನದಾಗಿಸಿಕೊಂಡಿದೆ.

Hyderabad airport
ಹೈದರಾಬಾದ್​ ಏರ್​ಪೋರ್ಟ್​

By

Published : Aug 9, 2021, 5:52 PM IST

ಹೈದರಾಬಾದ್ (ತೆಲಂಗಾಣ): ಸತತ 3ನೇ ಬಾರಿಗೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (RGIA) ಭಾರತ ಮತ್ತು ಮಧ್ಯ ಏಷ್ಯಾದ 'ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಎಂದು ಘೋಷಿಸಲಾಗಿದೆ.

ವಿಮಾನಯಾನ ಮತ್ತು ವಿಮಾನ ನಿಲ್ದಾಣ ವಿಮರ್ಶೆ, ಶ್ರೇಯಾಂಕ ಸೈಟ್ ನಡೆಸುವ ಯುನೈಟೆಡ್ ಕಿಂಗ್‌ಡಮ್ ಮೂಲದ 'ಸ್ಕೈಟ್ರಾಕ್ಸ್' ಸಂಸ್ಥೆ ನೀಡುವ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿ ಇದಾಗಿದೆ. ಈ ಸಿಹಿ ಸುದ್ದಿಯನ್ನು ಜಿಎಂಆರ್​ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (GHIAL) ಇಂದು ಹಂಚಿಕೊಂಡಿದೆ.

2020ರಲ್ಲಿ ವಿಶ್ವದ ಟಾಪ್​​ 100 ವಿಮಾನ ನಿಲ್ದಾಣಗಳಲ್ಲಿ 71ನೇ ಸ್ಥಾನದಲ್ಲಿದ್ದ ಹೈದರಾಬಾದ್​ ಏರ್​ಪೋರ್ಟ್, 2021ರಲ್ಲಿ 64ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಕೆಳಗಿನ ವಿಭಾಗಗಳಲ್ಲಿ ಪ್ರಶಂಸೆ ಗಳಿಸಿದೆ:

  • ಮಧ್ಯ ಏಷ್ಯಾ ಮತ್ತು ಭಾರತದ ಸ್ವಚ್ಛ ವಿಮಾನ ನಿಲ್ದಾಣ - 3ನೇ ಸ್ಥಾನ
  • ಭಾರತ ಮತ್ತು ಮಧ್ಯ ಏಷ್ಯಾದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ - 4ನೇ ಸ್ಥಾನ
  • ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ - 6ನೇ ಸ್ಥಾನ

ಸ್ಕೈಟ್ರಾಕ್ಸ್ ನಡೆಸುವ ಸಮೀಕ್ಷೆಯಲ್ಲಿ ಗ್ರಾಹಕರು ಮತ ಚಲಾಯಿಸಿ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡುತ್ತಾರೆ. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಆಗಮನ - ನಿರ್ಗಮನ, ಶಾಪಿಂಗ್, ಭದ್ರತೆ ಈ ಎಲ್ಲ ಅಂಶಗಳ ಮೇಲೆ ಸಮೀಕ್ಷೆಯಲ್ಲಿ ಗ್ರಾಹಕರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ABOUT THE AUTHOR

...view details