ಕರ್ನಾಟಕ

karnataka

ETV Bharat / bharat

ಗಂಡ-ಹೆಂಡ್ತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ.. ಕೊಲೆಗೈದು ಆತ್ಮಹತ್ಯೆಗೆ ಶರಣಾದ ಶಂಕೆ - ಗಂಡ-ಹೆಂಡ್ತಿ ಜೊತೆ ಇಬ್ಬರು ಮಕ್ಕಳ ಮೃತದೇಹ ಪತ್ತೆ

ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ವ್ಯಕ್ತಿಯೋರ್ವ ಪತ್ನಿ, ಇಬ್ಬರು ಮಕ್ಕಳ ಕೊಲೆಗೈದು ನಂತರ ಆತ್ಮಹತ್ಯೆಗೆ ಶರಣಾಗಿರುವ ಶಂಕಾಸ್ಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Nagpur Crime news
Nagpur Crime news

By

Published : Jan 18, 2022, 9:01 PM IST

ನಾಗ್ಪುರ್(ಮಹಾರಾಷ್ಟ್ರ): ಇಲ್ಲಿನ ದಯಾನಂದ ಪಾರ್ಕ್​​ ಪ್ರದೇಶದಲ್ಲಿ ಗಂಡ-ಹೆಂಡತಿ ಜೊತೆ ಇಬ್ಬರ ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಇದೊಂದು ಕೊಲೆ ಮತ್ತು ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ದಂಪತಿ ಹಾಗೂ 10 & 4 ವರ್ಷದ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಪತಿ ನೇಣಿಗೆ ಶರಣಾಗಿದ್ದು, ಉಳಿದಂತೆ ಮೂವರ ಮೃತದೇಹಗಳು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹೆಂಡತಿ ಹಾಗೂ ಇಬ್ಬರು ಮಕ್ಕಳ ಕೊಲೆ ಮಾಡಿರುವ ಪತಿ ಬಳಿಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಜನರ ಉಪಸ್ಥಿತಿ

ದಯಾನಂದ ಪಾರ್ಕ್​ ಪ್ರದೇಶದಲ್ಲಿ ಮದನ್​​ ಚೈನೀಸ್​ ಫುಡ್​ ಸ್ಟಾಲ್​ ಇಟ್ಟುಕೊಂಡಿದ್ದನು. ಆರ್ಥಿಕ ತೊಂದರೆಯಿಂದಾಗಿ ಅನೇಕರ ಬಳಿ ಸಾಲ ಪಡೆದುಕೊಂಡಿದ್ದನಂತೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣಕ್ಕಾಗಿ ಕುಟುಂಬಸ್ಥರ ಕೊಲೆಗೈದು, ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ ನವೀನ್​​ ಚಂದ್ರ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕುಟುಂಬದ ಯಜಮಾನ ಮದನ್​, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಕೊಲೆ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿರಬಹುದು ಎಂದಿದ್ದಾರೆ.

ಇದನ್ನೂ ಓದಿರಿ:'ಮಕ್ಕಳಿಗೆ ಕೋವ್ಯಾಕ್ಸಿನ್​ ಬಿಟ್ಟು ಬೇರೆ ಲಸಿಕೆ ನೀಡಬೇಡಿ': ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್​ ಮನವಿ

ಇಂದು ಬೆಳಗ್ಗೆ ಅವರು ವಾಸವಾಗಿದ್ದ ಮನೆಯಿಂದ ಯಾವುದೇ ರೀತಿಯ ಚಲನವಲನ ಕಾಣಿಸಿಕೊಳ್ಳದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಕಿರಣ್​, 10 ವರ್ಷದ ಮಗ ಮತ್ತು ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಮದನ್​ ಅಗರ್ವಾಲ್​​ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳೆದ ಕೆಲ ದಿನಗಳ ಹಿಂದೆ ತಮ್ಮ ಸ್ವಂತ ಮನೆ ಮಾರಾಟ ಮಾಡಿ, ಇವರು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ.

ABOUT THE AUTHOR

...view details